Wednesday, July 29, 2026
Google search engine
Homeರಾಯಚೂರುವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದದ್ದಲ್ ಬಸನಗೌಡ ಉದ್ಘಾಟನೆ: ಮೂಲಭೂತ ಸೌಕರ್ಯ ಒದಗಿಸಲು ಒತ್ತು...

ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ದದ್ದಲ್ ಬಸನಗೌಡ ಉದ್ಘಾಟನೆ: ಮೂಲಭೂತ ಸೌಕರ್ಯ ಒದಗಿಸಲು ಒತ್ತು ನೀಡುವ ಭರವಸೆ

ರಾಯಚೂರು,ಜೂ.- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನ ಕಾಮಗಾರಿಗಳನ್ನು ವಾಲ್ಮೀಕಿ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗು ಶಾಸಕ ದದ್ದಲ ಬಸನಗೌಡ ಉದ್ಘಾಟಿಸಿದರು.ಬೈಲ್ ಮರ್ಚೆಡ ಗ್ರಾಮದಲ್ಲಿಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನ,ಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸ. ಹಿ. ಶಾಲೆಯ 2 ಕೊಠಡಿಗಳು ನಿರ್ಮಾಣ,ರಾಜಲಬಂಡ ಗ್ರಾಮದಲ್ಲಿ ಕೆಕೆಆರ್ಡಿಬಿ ಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸ. ಹಿ. ಶಾಲೆಯ 3 ಕೊಠಡಿಗಳು ಮತ್ತುಸಿಎಂಐಡಿಪಿ ಯೋಜನೆಯಡಿ ರಾಜಲಬಂಡ- ಹರನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿ ವಿಕ್ಷಣೆ, ಕಂಬಳನೆತ್ತಿ ಗ್ರಾಮದಲ್ಲಿ ಕೆಕೆಆರ್ ಡಿಬಿ ಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸಮುದಾಯ ಭವನ ಉದ್ಘಾಟನೆ‌ನೇರವೆರಿಸಿದರು. ಗ್ರಾಮಗಳ ಮೂಲಭೂತ ಸೌಕರ್ಯ, ರಸ್ತೆ,ಶಾಲಾ ಕೋಣೆ ನಿರ್ಮಿಸಲಾಗಿದೆ. ಸರಕಾರ ಸೌಕರ್ಯ ಒದಗಿಸುವ ಅನುದಾನ ಸದ್ಭಳಕೆಯಾಗಬೇಕು ಎಂದರು. ಈ ಸಂದರ್ಭದಲ್ಲಿ *ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು, ನಾಮನಿರ್ದೆಶನ ಸದಸ್ಯರುಗಳು, ಅಧಿಕಾರಿಗಳು* ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments