ರಾಯಚೂರು,ಜೂ.೨೧- ಜಿಲ್ಲೆಯ ಸಿಂಧನೂರು ತಾಲೂಕಿನ ಬಂಗಾಲಿ ಕ್ಯಾಂಪಿನಲ್ಲಿ ಗಾಂಜ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಐದು ಲಕ್ಷ ಮೌಲ್ಯ ದ ೫ ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ಸಿಂಧನೂರುವ ತಾಲೂಕಿನ ಅರ್.ಎಚ್.ಕ್ಯಾಂಪ್ ೨ ರ ನಿವಾಸಿ ಹನುಮೇಶ ಸರ್ಕಾರ, ಅರ್.ಎಚ್‌ಕ್ಯಾಂಪಿನ ನಿವಾಸಿ ಸ್ವಾಗತ ಇವರಿಂದ ೩ ಕೆಜಿ ೯೦ ಗ್ರಾಂ ಹಾಗೂ ಇನ್ನೋಂದು ಪ್ರಕಣದಲ್ಲಿ ಮಣಿಶಂಕರ ಸರಕಾರ ಮತ್ತು ಶಿವುಕುಮಾರ ಮಂಡಲ್ ಎಂಬುವರರು ಬೇರೆ ಕಡೆಯಿಂದ ಮಾರಾಟ ಮಾಡುತ್ತಿದ್ದರು. ನಾಲ್ಕು ಜನರ ವಿರುದ್ದ ಕೇಸ್ ದಾಖಲಿಸಿ ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಎಸ್ಪಿ ಅರುಣ್ಷಾಂಗಿರಿ ಸಿಂಧನೂರು ಗ್ರಾಮೀಣ ಪೊಲೀಸರ ಜಾರ್ಯಶ್ಲಾಘಿಸಿದ್ದಾರೆ.ಗಾಂಜಾ ಪ್ರಕರಣ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡದಲ್ಲಿ ಸಿಂಧನೂರು ಗ್ರಾಮೀಣ ಸಿಪಿಐ ವಿನಾಯಕ,ಸಿಬ್ಬಂದಿಗಳಾದ ಮುಖ್ಯಪೇದೆಗಳಾದ ದೇವರಾಜ, ಮಹೇಶ,ಪೇದೆಗಳಾದ, ಶಂಕರ ಕುಲ್ಕರ್ಣಿ,ಹಫಿಜುಲ್ಲಾ, ತಿಪ್ಪಣ್ಣ,ಅಮರೇಗೌಡ,ಮಹಿಳಾ ಪೇದೆ ಅಯ್ಯಮ್ನ ಒಳಗೊಂಡ ತನಿಖೆ ತಂಡ ಗಾಂಜಾ ಪೆಡ್ಲಂರ್ಗಳನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆನೀಡಲಾಗಿದೆ.





Recent Comments