ರಾಯಚೂರು,ಸೆ.೧-ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಹೋರಾಟವೇ ಬಳ್ಳಾರಿ ಚಲೋ ಹೋರಾಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.ಪಟ್ಟಣದ ಬೆಂಗಳೂರು ಬೈಪಾಸ್ ರಸ್ತೆಯಲ್ಲಿ ಹಾಕಿರುವ ಬೃಹತ್ ವೇದಿಕೆಯಲ್ಲಿ ಬಳ್ಳಾರಿ ಚಲೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದ ಜನರ ಹಣವನ್ನು ಲೂಟಿ ಮಾಡುತ್ತಿರುವ, ಹಗಲು ದರೋಡೆ ನಡೆಸುತ್ತಿರುವ ಸರ್ಕಾರಕ್ಕೆ ಇನ್ನಷ್ಟು ಕಾಲ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಆಡಳಿತ ವೈಫಲ್ಯವನ್ನು ಜನರ ಮುಂದಿಡುವುದೇ ನಮ್ಮ ಹೋರಾಟದ ಉದ್ದೇಶ. ಜನರ ತೆರಿಗೆ ಹಣ ಜನರ ಅಭಿವೃದ್ಧಿಗೆ ಬಳಕೆಯಾಗಬೇಕೇ ಹೊರತು, ಕೆಲವರ ಜೇಬು ತುಂಬಲು ಅಲ್ಲ. ರಾಜ್ಯದ ಸಂಪತ್ತು ಲೂಟಿಯಾಗುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಯಡಿಯೂರಪ್ಪ ಗುಡುಗಿದರು.ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಮರೆತಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತಗೊAಡಿದ್ದು, ಜನಸಾಮಾನ್ಯರು ಸಮಸ್ಯೆಗಳಿಂದ ಬಳಲುವಂತಾಗಿದೆ. ಸರ್ಕಾರದ ವಿರುದ್ಧ ಜನರಲ್ಲಿ ಮೂಡಿರುವ ಆಕ್ರೋಶಕ್ಕೆ ಬಳ್ಳಾರಿ ಚಲೋ ಒಂದು ವೇದಿಕೆಯಾಗಲಿದೆ ಎಂದು ಅವರು ಹೇಳಿದರು.ಈ ಸರ್ಕಾರವನ್ನು ಕಿತ್ತೊಗೆದು ರಾಜ್ಯದಲ್ಲಿ ಜನಪರ, ಅಭಿವೃದ್ಧಿಪರ ಹಾಗೂ ಭ್ರಷ್ಟಾಚಾರಮುಕ್ತ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪದೊAದಿಗೆ ಹೋರಾಟ ನಡೆಸಲಾಗುತ್ತಿದೆ. ಇದು ಕೇವಲ ಬಿಜೆಪಿಯ ಹೋರಾಟವಲ್ಲ; ರಾಜ್ಯದ ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ.ಬಳ್ಳಾರಿ ಚಲೋ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧದ ಈ ಹೋರಾಟವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.ಬಳ್ಳಾರಿ ಚಲೋ ಕಾರ್ಯಕ್ರಮದ ಉದ್ದಕ್ಕೂ ತಾವು ಭಾಗವಹಿಸಲಿದ್ದು, ಸರ್ಕಾರದ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಘೋಷಿಸಿದರು.ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ರಾಜ್ಯದ ಎಲ್ಲಾ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ಬರಗಾಲ ಪೀಡಿತ ಪ್ರದೇಶಗಳಿಗೆ ತಕ್ಷಣ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. 187 ಕೋಟಿ ಹಗರಣದಲ್ಲಿ ನಾಗೇಂದ್ರ ಬಲಿಪಶುವಾಗಿದ್ದಾರೆ. ಈ ಹಣ ರಾಜೀವ್ ಗಾಂಧಿ, ಸೋನಿಯ ಗಾಂಧಿಗೆ ಹೋಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರು ಮಾಡಬಹುದು ಏನು ಬೇಕಾದರು ಕೊಡುತ್ತಾರೆ. ಡಿಕೆಗೆ ವ್ಯಾಪಾರ ಅಷ್ಟೇ ಗೊತ್ತು ಬೇರೇನು ಗೊತ್ತಿಲ್ಲ. ಬಸವರಾಜ ರಾಯರೆಡ್ಡಿಯವರು ಹಿಂದು ಧರ್ಮ, ಲಿಂಗಾಯತ ಧರ್ಮ, ವೀರಶೈವ ಧರ್ಮ ಒಳ್ಳೆದಲ್ಲ, ಇಸ್ಲಾಂ ಧರ್ಮ ಒಳ್ಳೇದು ಎಂದು ಹೇಳಿದ್ದಾರೆ. ಇದು ರಾಯರೆಡ್ಡಿ ಹೇಳಿಕೆಯಲ್ಲ ಕಾಂಗ್ರೆಸ್ ಸರ್ಕಾರದ ಹೇಳಿಕೆಯಾಗಿದೆ. ಇದು ಬಿಜೆಪಿಯ ಹೋರಾಟವಲ್ಲ, ಜನರ ಹೋರಾಟವಾಗಿದೆ ಎಂದರು.ಮಾಜಿ ಸಚಿವ ಶ್ರೀರಾಮುಲು ಮಾತನಾಡಿ ಡಿಕೆಶಿಯವರ ಸರ್ಕಾರ ಅರಮನೆಯಲ್ಲಿ ಕುಳಿತು ಆಡಳಿತ ಮಾಡುತ್ತಿದೆ, ಆದರೆ ಜನಸಾಮಾನ್ಯರು ಇಂದು ಬೀದಿಯಲ್ಲಿ ಗೋಳಾಡುತ್ತಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ್ ರವರು 5000 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಗ್ಯಾರಂಟಿ ಹಣ ಹೆಬ್ಬಾಳಕರ್ ಮನೆ ಸೇರಿದೆ. ಯಡಿಯೂರಪ್ಪನವರು ಎಸ್.ಟಿ. ಸಮುದಾಯಕ್ಕೆ 7 ರಷ್ಟು ಮೀಸಲಾತಿ ನೀಡಿದರೆ ಇಂದು ಕಾಂಗ್ರೆಸ್ ಸರ್ಕಾರ ಮತ್ತೆ 3 ರಷ್ಟು ಇಳಿಸಿದೆ. ಇಂತಹ ಸರ್ಕಾರ ನಮಗೆ ಬೇಕೆ? ಎಂದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಜಲಾಶಯಗಳ ನೀರಿನ ಮಟ್ಟ ತಳಮುಟ್ಟಿದೆ. ಶಾಲೆಯಲ್ಲಿ ಶಿಕ್ಷಕರಿಲ್ಲ, ಶಿಕ್ಷಣ ಮಟ್ಟ ಕುಸಿದಿದೆ ಎಂದರುಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಡಿಕೆ ಶಿವಕುಮಾರ ನೇತೃತ್ವದ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಹೋರಾಟವಾಗಿದೆ. ರಾಜ್ಯ ಸರ್ಕಾರ ಬಿಜೆಪಿಯ ಹೋರಾಟಕ್ಕೆ ಭಯ ಬಿದ್ದು, ನಾಗೇಂದ್ರ ಅವರ ರಾಜಿನಾಮೆ ªಪಡೆದುಕೊಂಡಿದೆ. ರಾಜ್ಯದಲ್ಲಿ ಡಿಕೆ, ಸಿದ್ದು, ಹೈಕಮಾಂಡ್ ಎಂಬ ಮೂರು ಗುಂಪುಗಳ ಸರ್ಕಾರವಿದೆ. ಬಿಜೆಪಿಯ ಹೋರಾಟ ಜೋರಾಗಬೇಕು ಅಂದಾಗ ಮಾತ್ರ ಕಾಂಗ್ರೆಸ್ನಲ್ಲಿ ವಿಕೆಟ್ಗಳು ನಿರಂತರವಾಗಿ ಬೀಳುತ್ತವೆ. ಎಲ್ಲರೂ ರಾಜಿನಾಮೆ ಕೊಡುವ ಸ್ಥಿತಿ ನಿರ್ಮಾಣವಾಗುತ್ತದೆ. ಬರ ಪ್ರದೇಶಗಳನ್ನು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು. ಉತ್ತರ ಕರ್ನಾಟಕ್ಕೆ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟ ತೀವ್ರವಾಗಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಸವರಾಜ ಬೊಮ್ಮಾಯಿ, ರಾಜ್ಯ ಸಹ ಉಸ್ತುವಾರಿ ಪಿ.ಸುಧಾಕರ ರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕರಾದ ಗಾಲಿ ಜನಾರ್ದನ ರೆಡ್ಡಿ, ಮಾನಪ್ಪ ಡಿ.ವಜ್ಜಲ್, ಡಾ.ಎಸ್.ಶಿವರಾಜ ಪಾಟೀಲ್, ರಾಜ್ಯ ಉಪಾಧ್ಯಕ್ಷ ರಾಜುಗೌಡ ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ, ಬಿ.ವಿ.ನಾಯಕ, ಪಿ.ರಾಜೀವ್, ಶಶೀಲ್ ಜಿ.ನಮೋಶಿ, ಬಸನಗೌಡ ಬ್ಯಾಗವಾಟ್, ಅರವಿಂದ ಬೆಲ್ಲದ್, ರವಿಕುಮಾರ ಸೇರಿದಂತೆ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.





Recent Comments