ರಾಯಚೂರು, ಆ.28: ನೇಪಾಳದಲ್ಲಿ ಸಂಭವಿಸಿರುವ ಭಾರೀ ಮಳೆ, ಮೇಘಸ್ಫೋಟ ಹಾಗೂ ಹಠಾತ್ ಪ್ರವಾಹದಿಂದಾಗಿ ಅಲ್ಲಿನ ಹಲವು ಪ್ರದೇಶಗಳಲ್ಲಿ ಪ್ರಕೃತಿ ವಿಕೋಪದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ತೆರಳಿರುವ ರಾಯಚೂರು ಜಿಲ್ಲೆಯ ಪ್ರವಾಸಿಗರು ಅಥವಾ ನಾಗರಿಕರ ಸುರಕ್ಷತೆ ಕುರಿತು ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸುತ್ತಿದೆ.ನೇಪಾಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಹಾಗೂ ‘ಫ್ಲ್ಯಾಶ್ ಫ್ಲಡ್’ (ಹಠಾತ್ ಪ್ರವಾಹ) ಹಿನ್ನೆಲೆಯಲ್ಲಿ, ನೇಪಾಳದಲ್ಲಿರುವ ರಾಯಚೂರು ಜಿಲ್ಲೆಯ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದಲ್ಲಿ, ಅವರ ವಿವರಗಳನ್ನು ತಕ್ಷಣ ಜಿಲ್ಲಾಡಳಿತಕ್ಕೆ ನೀಡುವಂತೆ ಮನವಿ ಮಾಡಲಾಗಿದೆ.ನಾಪತ್ತೆಯಾಗಿರುವ ವ್ಯಕ್ತಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಜಿಲ್ಲಾಡಳಿತದ ವತಿಯಿಂದ ನೀಡಲಾಗಿರುವ ಆನ್ಲೈನ್ ಫಾರ್ಮ್ನಲ್ಲಿ ದಾಖಲಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ರಾಯಚೂರು ಜಿಲ್ಲಾಧಿಕಾರಿ ಕಚೇರಿಯ ವಿಪತ್ತು ನಿರ್ವಹಣಾ ಸಹಾಯವಾಣಿ 08532-226383 ಹಾಗೂ ರಾಜ್ಯ ತುರ್ತು ಸಹಾಯವಾಣಿ 1077ಕ್ಕೆ ಸಂಪರ್ಕಿಸಬಹುದು. ಇಮೇಲ್ ಮೂಲಕವೂ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ.ನೇಪಾಳದಲ್ಲಿರುವ ಭಾರತೀಯರ ಕುರಿತು ಮಾಹಿತಿ ನೀಡಲು ಭಾರತೀಯ ರಾಯಭಾರಿ ಕಚೇರಿಯ ಸಹಾಯವಾಣಿ ಸಂಖ್ಯೆಗಳನ್ನೂ ಜಿಲ್ಲಾಡಳಿತ ಪ್ರಕಟಿಸಿದೆ. +977 9851316807, +977 9709107500 ಹಾಗೂ +977 9810326117 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪೂವಿತಾ.ಎಸ್ .ಮನವಿ ಮಾಡಿದ್ದಾರೆ.





Recent Comments