Friday, June 19, 2026
Google search engine
Homeರಾಯಚೂರುರಾಯಚೂರು ನಗರವಿವಿಧ ಗ್ರಾಮಗಳ ಕಾಮಗಾರಿಗೆ ಶಾಸಕ ದದ್ದಲ ಬಸನಗೌಡ ಚಾಲನೆ: ಶೈಕ್ಷಣಿಕ ಅಭಿವೃದ್ದಿ ನೂರು ಕೋಟಿ ಅನುದಾನ

ವಿವಿಧ ಗ್ರಾಮಗಳ ಕಾಮಗಾರಿಗೆ ಶಾಸಕ ದದ್ದಲ ಬಸನಗೌಡ ಚಾಲನೆ: ಶೈಕ್ಷಣಿಕ ಅಭಿವೃದ್ದಿ ನೂರು ಕೋಟಿ ಅನುದಾನ

ರಾಯಚೂರು,ಜೂ‌೧೮- ೩೭೧(ಜೆ) ಜಾರಿಗೊಳಿಸಿದ್ದರಿಂದ ಈ ಭಾಗದ ನಿರುದ್ಯೋಗಿಗಳಿಗೆ ವರದಾನ ನೇಮಕಾತಿಯ ಸದ್ಬಳಕೆ ಮಾಡಿಕೊಳ್ಳಬೇಕೆಂದು ಗ್ರಾಮೀಣ ಶಾಸಕ ದದ್ದಲ ಬಸನಗೌಡ ಹೇಳಿದರು.ಅವರಿಂದು ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟಿಸಿ ಮಾತನಾಡಿದರು.ಆಶಾಪೂರ ಗ್ರಾಮದಲ್ಲಿಕೆಕೆಅರ್ಡಿಬಿಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸ. ಹಿ. ಶಾಲೆಯ 2 ಕೊಠಡಿ,ಉಡಮಗಲ್-ಖಾನಾಪೂರ*ಗ್ರಾಮದಲ್ಲಿKKRDB ಯೋಜನೆಯಡಿ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ* ಭೂಮಿ ಪೂಜೆ,ಗಾರಲದಿನ್ನಿ ಗ್ರಾಮದಲ್ಲಿ,*KKRDB ಮೈಕ್ರೋ ಯೋಜನೆಯಡಿ ನಿರ್ಮಿಸಲಾದ ಸ. ಪೌ. ಶಾಲೆಯ ನೂತನ ಕಟ್ಟಡ ಉದ್ಘಾಟನೆ* 10ಲಕ್ಷ ರೂ ವೆಚ್ಚದಲ್ಲಿ ಶ್ರೀ ಮಾರೆಮ್ಮವ್ವ ದೇವಸ್ಥಾನ ನಿರ್ಮಾಣ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು.ಕ್ಷೆತ್ರದ ಸುಮಾರು 13 ಸರಕಾರಿ ಫ್ರೌಡ ಶಾಲೆಗಳು, 8 KPS ಶಾಲೆಗಳು ಮಂಜೂರು ಮಾಡಲಾಗಿದೆ ‌ ಎರಡು ಬಾರಿ ಶಾಸಕನಾಗಿ ಸುಮಾರು 100 ಕೋಟಿ ರೂ ಹೆಚ್ಚು ಶಿಕ್ಷಣ ಇಲಾಖೆಗೆ ಅನುದಾನವನ್ನು ನೀಡಲಾಗಿದೆ, ಪ್ರತಿ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಕೆಲಸ ಕಾರ್ಯ ಮಾಡಿರುವದಾಗಿ ಹೇಳಿದರು.ಈ ಸಂದರ್ಭದಲ್ಲಿ *ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು, ಗ್ರಾಮಸ್ಥರು, ನಾಮನಿರ್ದೆಶನ ಸದಸ್ಯರುಗಳು, ಅಧಿಕಾರಿಗಳು* ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments