Tuesday, July 28, 2026
Google search engine
Homeಮುಖ್ಯಾಂಶಗಳುವಿಚಾರಣಾಧೀನ ಖೈದಿ ಆಸ್ಪತ್ರೆಯ ಲ್ಲಿ ಆತ್ಮಹತ್ಯೆ

ವಿಚಾರಣಾಧೀನ ಖೈದಿ ಆಸ್ಪತ್ರೆಯ ಲ್ಲಿ ಆತ್ಮಹತ್ಯೆ

ರಾಯಚೂರು, ಜು.೨೮- ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ವಿಚಾರದೀನ ಕೈದಿಯೊರ್ವ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.ಲಿಂಗಸುಗುರು ತಾಲೂಕಿನ ಕೊಲೆ ಘಟನೆಯಲ್ಲಿ ಆರೋಪಿಯಾಗಿದ್ದ ಹುಬ್ಬಳ್ಳಿ ಮೂಲದ ಪವನಕುಮಾರ ಎಂಬಾತ ಎಂದು ಗುರುತಿಸಲಾಗಿದೆ. ಟಿಬಿ ಮತ್ತು ಅನ್ನನಾಳದಿಂದ ಬಳಲುತ್ತಿದ್ದರಿಂದ ಜು.೨೨ ರಂದು ರಿಮ್ಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಶೌಚಾಲಯ ಕ್ಕೆ ಹೋಗುವದಾಗಿ ಹೇಳಿ ಹೋಗಿದ್ದಾಗ ಶೌಚಾಲಯ ದ ಕಿಟಕಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಮಾರ್ಕೆಟ್ ಯಾರ್ಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಸ್ಥಳಕ್ಕೆ ಎಸ್ ಪಿ ಅರುಣ್ಷುಂಗಿರಿ ಬೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular

Recent Comments