Wednesday, July 29, 2026
Google search engine
Homeಮುಖ್ಯಾಂಶಗಳುವಾರದಲ್ಲಿ ಬೇಡಿಕೆ ಇಡೇರಿಸುವ ಭರವಸೆ; ದೇವದಾಸಿ ಮಹಿಳೆಯರ ಅಹೋರಾತ್ರಿ ಧರಣಿ ಅಂತ್ಯ

ವಾರದಲ್ಲಿ ಬೇಡಿಕೆ ಇಡೇರಿಸುವ ಭರವಸೆ; ದೇವದಾಸಿ ಮಹಿಳೆಯರ ಅಹೋರಾತ್ರಿ ಧರಣಿ ಅಂತ್ಯ

ರಾಯಚೂರು,ಜು.೨೨-ದೇವದಾಸಿ ಮಹಿಳೆಯರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರಾರಂಭವಾಗಿದ್ದ ಅಹೋರಾತ್ರಿ ಧರಣಿ ಅಧಿಕಾರಿಗಳ ಭರವಸೆ ಹಿನ್ನಲೆಯಲ್ಲಿ ಅಂತ್ಯಗೊಂಡಿದೆ.ದೇವದಾಸಿ ಮಹಿಳಾ ವಿಮೋಚನ ಸಂಘ, ಜಿಲ್ಲಾ ಘಟಕದಿಂದ ರಾಜ್ಯ ಸರಕಾರದ ವಿರುದ್ಧ ನಗರದ ಟಿಪ್ಪು ಸುಲ್ನಾನ್ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.ಫಲಾನುಭವಿಗಳಿಂದ ವಂತಿಗೆ ಹಣವನ್ನು ಕೈಬಿಟ್ಟು ಸರ್ಕಾರವೇ ಉಚಿತ ಪುನರ್ವಸತಿ ಕಲ್ಪಸಬೇಕು, ದೇವದಾಸಿ ಮಹಿಳೆಯರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಪ್ರತಿ ಕುಟುಂಬಕ್ಕೆ 5 ಎಕರೆ ಜಮೀನು ಒದಗಿಸಬೇಕು ಎಂದು ಆಗ್ರಹಿಸಿ ಹೋರಾಟ ಪ್ರಾರಂಭವಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ಧೇಶಕಿ ಶರಣಮ್ಮ ಕಾರ್ನೂರ್ ರವರು ಧರಣಿ ಪ್ರತಿಭಟನೆಯ ಸ್ಥಳಕ್ಕೆ ಬೇಟಿ ನೀಡಿ ದೇವದಾಸಿ ಮಹಿಳೆ ಮತ್ತು ವೃದ್ಧರಿಗೆ ಸ್ಪಂಧಿಸಿ ಮನವೊಲಿಸಿ ಮಾತನಾಡಿ ನಾವು ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ, ಒಂದು ವಾರದೊಳಗೆ ನಿಮ್ಮ ಬೇಡಿಕೆಗಳನ್ನು ಇಡೇರಿಸುವುದಾಗಿ ಭರವಸೆ ನೀಡಿದರು.ದೇವದಾಸಿ ಮಹಿಳೆಯರು ಅಧಿಕಾರಿಗಳು ಕೊಟ್ಟ ಮಾತಿನಂತೆ ತಮ್ಮ ಅಹೋ ರಾತ್ರಿ ಧರಣಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ, ಆದರೆ ಒಂದು ವಾರದ ನಂತರ ನಮಗೆ ಸ್ಪಂಧಿಸದಿದ್ದರೆ ಇದಕ್ಕಿಂತಲೂ ಉಗ್ರ ಪ್ರತಿಭಟನೆ ಮಾಡುವದಾಗಿ ಪ್ರತಿಭಟಿಸುವದಾಗಿಇಲಾಖೆಗೆ ಎಚ್ಚರ ನೀಡಿದ್ದಾರೆ. ಹೋರಾಟ ದಲ್ಲಿ ಎಚ್.ಪದ್ಮ,ಡಿ.ಎಸ್ ಶರಣಬಸವ ,ಕೆ‌.ಜಿ.ವಿರೇಶ ಸೇರಿದಂತೆ ಮಹಿಳೆಯರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular

Recent Comments