ರಾಯಚೂರು, ಸೆ.೬- ರಾಜ್ಯದಲ್ಲಿರುವ ಎದುರಾಗಿರುವ ಬರ ನಿರ್ವಹಣೆ ಗೆ ಆರ್ಥಿಕ ನೆರವು ನೀಡುವದು ಕೇಂದ್ರ ಜವಬ್ದಾರಿ. ಸ್ಪಂದಿಸದೇ ಇದ್ದರೆ ಹೋರಾಟ ಮಾಡುವದಾಗಿ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಹೇಳಿದರು.ರಾಯಚೂರಿನಲ್ಲಿ ಮಾಧ್ಯಮ ಗಳೊಂದಿಗೆಮಾತನಾಡಿ, ಕಳೆದ ಬಾರಿ ೩೯ ಸಾವಿರ ಕೋಟಿ ನಷ್ಟವಾದರೂ ಹಣ ನೀಡಲಿಲ್ಲ.ಸುಪ್ರೀಂ ಕೋಟ ೯ ಮೊರೆ ಹೋಗಿ ಅನುದಾನ ಪಡೆಯಬೇಕಾಯಿತು. ಈ ಬಾರಿ ಅದೇ ಸ್ಥಿತಿ ನಿರ್ಮಾಣ ಕ್ಕೆ ಅವಕಾಶ ನೀಡಬಾರದು. ಬರ ಅನುದಾನಕ್ಕೆ ಮನವಿ ನೀಡಲಾಗಿದೆ. ಅನುದಾನ ನೀಡದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿಯವರು ನಡೆಸುತ್ತಿರುವ ಪಾದಯಾತ್ರೆ ವಿಫಲವಾಗಿದೆ. ಅವರ ಬೇಡಿಕೆ ಯಂತೆ ನಾಗೇಂದ್ರ ರಾಜೀನಾಮೆ ನೀಡಿದ್ದರು.ಪಾದಯಾತ್ರೆ ಕೈಗೊಂಡಿರುವ ಅವರಿಗೆ ಜನಬೆಂಬಲವೇ ದೊರಕಿಲ್ಲ. ಸದನದಲ್ಲಿ ಚರ್ಚಿಸದೇ ಬರ ಘೋಷಣೆ ಮಾತ್ರ ಒತ್ತಾಯಿಸುತ್ತಿದ್ದಾರೆ.ದೇಶದಲ್ಲಿ ಅತಿಹೆಚ್ಚು ಕರ ರಾಜ್ಯ ದಿಂದ ಸಂಗ್ರಹವಾಗುತ್ತದೆ. ಆದರೆ ಕೇಂದ್ರ ಸರಕಾರ ಮಾತ್ರ ನೆರವು ನೀಡುತ್ತಿಲ್ಲ.ಬಿಜೆಪಿಯವರ ಪಾದಯಾತ್ರೆ ಗೆ ಪರ್ಯಾಯ ವಾಗಿ ನಾವು ಮಾಡುವದಿಲ್ಲ.ಪಕ್ಷ ಸಂಘಟನೆ,ರಾಜಕೀಯ ವಾಗಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು. ಮಾಜಿ ಸಚಿವ ಬೋಸರಾಜ, ಮಹ್ಮದ ಶಾಲಂ,ನಾಗವೇಣಿ ಸೇರಿ ಅನೇಕರಿದ್ದರು.





Recent Comments