ರಾಯಚೂರು, ಜು.೧೨- ಮಾಜಿ ಶಾಸಕ ಸೈಯದ್ ಯಾಸೀನ್ ನಿಧನರಾಗಿದ್ದಾರೆ.ಬೆಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ಭಾನುವಾರ ಬೆಳಿಗ್ಗೆ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲ ಗಳು ತಿಳಿಸಿವೆ..೧೯೯೯ ಮತ್ತು ೨೦೦೮ರಲ್ಲಿ ಎರಡು ಬಾರಿ ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಪಸಂಖ್ಯಾತ ನಿಗಮದ ಆಧ್ಯಕ್ಷರರಾಗಿ ಹಾಗೂ ಸೇರಿದಂತೆ ಅನೇಕ ಹುದ್ದೆಗಳನ್ನ ನಿರ್ವಹಿಸಿದ್ದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಮೃತ ಕಳಬರಹವನ್ನು ರಾಯಚೂರಿಗೆ ಕರೆತರಲಾಗುತ್ತಿದೆ. ಪುತ್ರರು,ಪತ್ನಿ ಸೇರಿದಂತೆ ಅಪಾರ ಅಭಿಮಾನಗಳನ್ನು ಅಗಲಿದ್ದಾರೆ
ರಾಯಚೂರು ನಗರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ ಯಾಸೀನ ಅವರು ತಮ್ಮ 74 ವರ್ಷ ವಯಸ್ಸಿನಲ್ಲಿ ಅನಾರೋಗ್ಯದ ಕಾರಣ ಇಂದು ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಸೈಯದ ಯಾಸೀನ ಅವರು ಪತ್ನಿ, ನಾಲ್ಕು ಜನ ಗಂಡು ಮಕ್ಕಳು ಹಾಗೂ ಅಪಾರ ಬಂದು, ಬಳಗ, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.ಸೈಯದ ಯಾಸೀನ ಅವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ ಅವರ ಅಳಿಯರಾಗಿದ್ದು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಆರು ಸಲ ಸ್ಪರ್ಧಿಸಿದ್ದರು, ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಅಯ್ಕೆಯಾಗಿದ್ದರು, 1999 ಹಾಗೂ 2008ರಲ್ಲಿ ಶಾಸಕರಾಗಿ ಅಯ್ಕೆಯಾಗಿದ್ದರು.ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದರು, ಕೆಪಿಸಿಸಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿ ಪಕ್ಷ ಸಂಘಟನೆಯ ಜವಾಬ್ದಾರಿಯು ಸಹ ನಿರ್ವಹಿಸಿದ್ದರು.ಅವರ ಅಂತ್ಯಕ್ರಿಯೆ ಇಂದು ಸಾಯಂಕಾಲ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ನೆರವೇರಬಹುದು ಎಂದು ಕುಟುಂಬದ ಸದ್ಯರು ತಿಳಿಸಿದ್ದಾರೆ.





Recent Comments