Wednesday, July 29, 2026
Google search engine
Homeರಾಯಚೂರುರಾಯಚೂರು ನಗರಬಸವನಭಾವಿ ವೃತ್ತ ಸೌಂದರಿಕರಣ ಶೀಲಾ ಮಂಟಪ ನಿರ್ಮಾಣದ ಕಾಮಗಾರಿಗೆ ಚಾಲನೆ

ಬಸವನಭಾವಿ ವೃತ್ತ ಸೌಂದರಿಕರಣ ಶೀಲಾ ಮಂಟಪ ನಿರ್ಮಾಣದ ಕಾಮಗಾರಿಗೆ ಚಾಲನೆ

ಧರ್ಮ ಪತ್ನಿ ಪಾರ್ವತಮ್ಮ ಹೆಸರಲ್ಲಿ ಭವ್ಯ ಕಲ್ಲಿನ ಶೀಲಾ ಮಂಟಪ ನಿರ್ಮಾಣ-ಪಾಪಾರೆಡ್ಡಿ ರಾಯಚೂರು,ಜು.3-ಮುಂಗಾರು ಸಾಂಸ್ಕೃತಿಕ ಹಬ್ಬದ ಪರಂಪರೆ ರಕ್ಷಣೆ ರೈತನ ಜೋಡಿ ಎತ್ತು, ಬಸವಣ್ಣ ಹಾಗೂ ಮುನ್ನೂರು ಕಾಪು ಸಮಾಜದ ವಂಶಸ್ಥರಾದ ಶ್ರೀಕೃಷ್ಣದೇವರಾಯ ಶೀಲಾ ಮಂಟಪ ನಿರ್ಮಾಣಕ್ಕೆಮುನ್ನೂರುಕಾಪು ಸಮಾಜದ ಹಿರಿಯ ಮುಖಂಡರು ಹಾಗೂ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಅವರು ಭವ್ಯ ನಿರ್ಮಾಣಕ್ಕೆ ಚಾಲನೆ ನೀಡಿದರು.ಮಾಜಿ ಶಾಸಕರಾದ ಎ.ಪಾಪರೆಡ್ಡಿ ಅವರು ತಮ್ಮ ಸ್ವಂತ 37 ಲಕ್ಷ ವೆಚ್ಚದಲ್ಲಿ ಬಸವಣ್ಣ ವೃತ್ತವನ್ನು ಸೌಂದರೀಕರಣ ನಿರ್ಮಾಣಕ್ಕೆ ಕಲ್ಲಿನ ಪೂಜಾ ಕಾರ್ಯಕ್ರಮ ನೆರೆವೇರಿಸಲಾಯಿತು.ಪಾಪಾರೆಡ್ಡಿ ಹಾಗೂ ಸಮಾಜದ ಅಧ್ಯಕ್ಷರು ಬೆಲ್ಲಂ ನರಸರೆಡ್ಡಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಮೂಲಕ ರಾಜ್ಯದಲ್ಲಿ ಮಾದರಿ ಸಮಾಜ ಎಂದು ಖ್ಯಾತಿಗೆ ಗುರಿಯಾಗಿದೆ. ಈಗಾಗಲೇ ಬಸವಣಬಾವಿ ವೃತ್ತದಲ್ಲಿ ರೈತನ ಜೋಡೆತ್ತು,ಬಸವಣ್ಣ ಹಾಗೂ ಶ್ರೀಕೃಷ್ಣದೇವರಾಯ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಇದನ್ನು ಸೌಂದರೀಕರಣ ಮಾಡಲು ಕಲ್ಲಿನ ಭವ್ಯ ಮಂಟಪವನ್ನು ನಿರ್ಮಾಣಕ್ಕೆ ಚಾಲನೆ ನೀಡಿದರು. ನಂತರ ಮಾಜಿ ಶಾಸಕರು ಪಾಪಾರೆಡ್ಡಿ ಅವರು ಮಾತನಾಡಿ, ಮುನ್ನೂರು ಕಾಪು ಸಮಾಜ ರಾಯಚೂರಿನ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಬಸವಭಾವಿ ವೃತ್ತದಲ್ಲಿ ರೈತನ ಜೋಡೆತ್ತು, ಬಸವಣ್ಣ ಹಾಗೂ ಶ್ರೀಕೃಷ್ಣದೇವರಾಯ ಮೂರ್ತಿಯನ್ನು ಸೌಂದರೀಕರಣ ಮಾಡಲು ನನ್ನ ಧರ್ಮ ಪತ್ನಿ ಪಾರ್ವತಮ್ಮ ಹೆಸರಲ್ಲಿ 37 ಲಕ್ಷ್ಮ ವೆಚ್ಚದಲ್ಲಿ ಕಲ್ಲಿನ ಭವ್ಯ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಇದೇ ರೀತಿ ಧರ್ಮ ಪತ್ನಿ ಹೆಸರಲ್ಲಿ ರಾಯಚೂರಿನ ಪ್ರಸಿದ್ಧ ಹಾಗೂ ಪುರಾತನ ಕಾಲದ ರಾಯಚೂರು ಯಲ್ಲಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ 50 ಲಕ್ಷ ವೆಚ್ಚದಲ್ಲಿ ಕಲ್ಲಿನಿಂದ ಭವ್ಯ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ.ಮುನ್ನೂರು ಕಾಪು ಸಮಾಜದ ವಂಶಸ್ಥರಾದ ಶ್ರೀ ಕೃಷ್ಣದೇವರಾಯ ಅವರ ಮಾದರಿಯಲ್ಲಿ ನನ್ನ ಧರ್ಮ ಪತ್ನಿ ಪಾರ್ವತಮ್ಮ ಅವರ ಸವಿ ನೆನಪುಗಾಗಿ ಕಲ್ಲಿನಿಂದ ಭವ್ಯ ಮಂಟಪವನ್ನು ನಿರ್ಮಿಸಲಾಗುತ್ತಿದೆ.ಇತ್ತೀಚಿಗೆ ನನ್ನ ಧರ್ಮ ಪತ್ನಿ ಅಗಲಿಕೆ ನನಗೆ ತೀವ್ರ ನೋವು ಉಂಟಾಗಿದ್ದು, ನನ್ನ ಜನಪ್ರಿಯತೆ ಹಿಂದೆ ಅವರ ಕೊಡುಗೆ ಬಹುದೊಡ್ಡದು, ಅವರ ಅಗಲಿಕೆ ಹಿಂದೆ ಮುಂಗಾರು ಸಾಂಸ್ಕೃತಿಕ ರಾಯಚೂರು ನಾಡ ಹಬ್ಬವನ್ನು ಈ ಭಾರಿ ತಾತ್ಕಾಲಿಕ ಮುಂದೂಡಲಾಗಿದ್ದು,ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ವೈಭವಕರಣದಿಂದ ರೈತನ ಜೋಡುತ್ತು, ಬಸವಣ್ಣ ಹಾಗೂ ಶ್ರೀಕೃಷ್ಣದೇವರಾಯ ಅವರ ಶೀಲಾ ಮಂಟಪವನ್ನು ಕಲ್ಲಿನಿಂದ ನಿರ್ಮಾಣ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರು ಬೆಲ್ಲಂ ನರಸರೆಡ್ಡಿ,ಯು.ಕೃಷ್ಣಮೂರ್ತಿ, ಬಂಗಿ ನರಸರೆಡ್ಡಿ, ಕುಕ್ಕಲ ನರಸಿಂಹಲು, ಗುಡ್ಸಿ ಪ್ರತಾಪ್ ರೆಡ್ಡಿ,ಯು.ಗೋವಿಂದರೆಡ್ಡಿ, ಪಿ.ಶ್ರೀನಿವಾಸ್ ರೆಡ್ಡಿ,ಎನ್. ಶ್ರೀನಿವಾಸ್ ರೆಡ್ಡಿ,ಎಸ್ ಜನಾರ್ದನ ರೆಡ್ಡಿ,ಪುಂಡ್ಲ ರಾಜೇಂದ್ರರೆಡ್ಡಿ ಪ್ಯಾಲಂ ಮಲ್ಲೇಶ, ಗಂಗಣ್ಣಗಾರು ಭೀಮರೆಡ್ಡಿ, ಜಿ.ವಿರೇಶರೆಡ್ಡಿ, ನಿಂಬೆಕಾಯಿ ಭೀಮರೆಡ್ಡಿ, ಬಂಗಿ ಮುನಿರೆಡ್ಡಿ, ಜಿ.ವೀರೇಶರೆಡ್ಡಿ, ಯು.ನರಸರೆಡ್ಡಿ, ಗುಂಜಪಲ್ಲಿ ರವಿ, ಪಾಪಣ್ಣಗಾರು ರವಿ, ಮುನ್ನೂರು ಕಾಪು ಸಮಾಜದ ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments