Wednesday, July 29, 2026
Google search engine
Homeದೇಶದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಭೇಟಿ ಮಾಡಿದ ಬೋಸರಾಜು ನೇತೃತ್ವದ ನಿಯೋಗ

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಭೇಟಿ ಮಾಡಿದ ಬೋಸರಾಜು ನೇತೃತ್ವದ ನಿಯೋಗ

ರಾಯಚೂರು,ಜು.೧೪- ಉಸ್ರುವಾರಿ ಸಚಿವರ ನೇಮಕಾತಿ ಕಾಂಗ್ರೆಸ್ ಪಕ್ಷದ ವರಿಷ್ಟರ ನಿರ್ಧಾರ ಮೇಲೆ ಅವಲಂಬಿತವಾಗಿದ್ದು ಸಚಿವ ಸ್ಥಾನ ಅಕಾಂಕ್ಷಿಗಳ ಲಾಬಿ ಜೋರಾಗಿದೆ.ಇಂದು ನವದೆಹಲಿಯಲ್ಲಿ ಮಾಜಿ ಸಚಿವ ಎನ್. ಎಸ್. ಬೋಸುರಾಜು ನೇತೃತ್ವದ ನಿಯೋಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬೇಟಿ ಮಾಡಿದೆ. ಸಂಸದ ಜಿ. ಕುಮಾರ್ ನಾಯಕ್ ,ಮಾನವಿ ಶಾಸಕ ಜಿ ಹಂಪಯ್ಯ ನಾಯಕ ಸಾಹುಕಾರ್ ,ಮಸ್ಕಿ ಶಾಸಕ ಆರ್. ಬಸನಗೌಡ ತುರ್ವಿಹಾಳ , ಮಾಜಿ ಶಾಸಕರಾದ ಡಿ. ಎಸ್. ಹುಲಗೇರಿ ಮುಖಂಡರಾದ ಮೊಹಮ್ಮದ್ ಶಾಲಂ ಹಾಗೂ ರಾಜಶೇಖರ ನಾಯಕ ಅವರೊಂದಿಗೆ ಭೇಟಿ ಮಾಡಿದೆ. ರಾಜ್ಯದ ರಾಜಕೀಯ ಬೆಳವಣಿಗೆಗಳು, ಪಕ್ಷ ಸಂಘಟನೆ ಹಾಗೂ ಜನಪರ ಅಭಿವೃದ್ಧಿ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು ಎಂದು ಹೇಳಲಾಗಿದೆ. ನಾಲ್ಕೈದು ದಿನದಲ್ಲಿ ಸಚಿವರ ನೇಮಕಾತಿ ಅಂತಿಮಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES
- Advertisment -
Google search engine

Most Popular

Recent Comments