ರಾಯಚೂರು:ಜೂ,26,ಭವಿಷ್ಯದಲ್ಲಿ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆ ಉಂಟು ಮಾಡುವ ‘ಪೋಲಿಯೋ ಮೈಲಿಟಿಸ್’ ವೈರಸ್ ನಿಯಂತ್ರಣಕ್ಕಾಗಿ 1995 ರಿಂದ ಭಾರತ ಸರಕಾರವು ಅಭಿಯಾನದ ರೂಪದಲ್ಲಿ ಹಮ್ಮಿಕೊಳ್ಳುತ್ತಾ ಬರಲಾಗಿರುವ “ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ’ವು ಈ ವರ್ಷ ಜೂನ್ 28 ರ ಭಾನುವಾರದಂದು ಜಿಲ್ಲಾದ್ಯಂತ ಜರುಗಲಿದ್ದು ಪಾಲಕರು ಹತ್ತಿರದ ಬೂತ್‌ಗಳಲ್ಲಿ ಲಸಿಕೆ ಹಾಕಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆರಾಯಚೂರು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಗರ ಗ್ರಾಮೀಣ ಪ್ರದೇಶ ದ ೫ ವರ್ಷದೊಳಗಿನ ಒಟ್ಟು 2,60,002 ಮಕ್ಕಳಿಗೆ ಲಸಿಕೆ ಹಾಕುವ ಗುರಿಯೊಂದಿಗೆ 3,29,000 ಡೋಸ್ ಲಸಿಕೆ ಸಿದ್ದವಾಗಿಟ್ಟು ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 4,50,732 ಮನೆಗಳ ಭೇಟಿಯ ಗುರಿ ಇದ್ದು, ಇದಕ್ಕಾಗಿ 1176 ಮನೆ ಭೇಟಿ ತಂಡಗಳು, 52 ಟ್ರಾನ್ಸಿಟ್ ತಂಡಗಳು ಹಾಗೂ 32 ಸಂಚಾರಿ ತಂಡಗಳು ಸೇರಿದಂತೆ ಒಟ್ಟು 1260 ತಂಡಗಳನ್ನು ನಿಯೋಜಿಸಲಾಗಿದ್ದು, ಒಟ್ಟು 2530 ಲಸಿಕಾ ಕಾರ್ಯಕರ್ತರು, 248 ಮೇಲ್ವಿಚಾರಕರು ಮತ್ತು 05 ತಾಲ್ಲೂಕುಗಳಿಗೆ ಉಸ್ತುವಾರಿ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 827 ಕ್ಲಿಷ್ಟಕರ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೆ ಹಾಗೂ ಮನೆ ಬೇಟಿಯೊಂದಿಗೆ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಸಂತೆ ಹಾಗೂ ಮಾರುಕಟ್ಟೆಗಳಲ್ಲಿ ನಿರಂತರವಾಗಿ ಲಸಿಕೆ ಹಾಕಲು ಇಲಾಖೆಯ ಸಿಬ್ಬಂದಿ ಹಾಗೂ ರಿಮ್ಸ್, ಎಸ್‌ಕೆಇ ಹಾಗೂ ನಂದನಿ ನರ್ಸಿಂಗ್ ಕಾಲೇಜು, ನವೋದಯ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ತಾಲೂಕಾ ಕೇಂದ್ರಗಳಲ್ಲಿ ಸ್ಥಳಿಯ ನರ್ಸಿಂಗ್ ಕಾಲೇಜು ವಿಧ್ಯಾರ್ಥಿಗಳು, ಅಗತ್ಯವಿರುವಡೆ ಅಂಗನವಾಡಿ ಕಾರ್ಯಕರ್ತೆಯರು ಲಸಿಕಾ ಕಾರ್ಯದಲ್ಲಿ ಭಾಗವಹಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.ಪ್ರೀಆ್ಯಕ್ಟಿವಿಟಿ: ಈಗಾಗಲೆ ಜಿಲ್ಲೆಯ ಅಂಗನವಾಡಿ, ನರ್ಸರಿ, ಮೊಂಟೆಸ್ಸರಿ, ಶಿಶುವಿಹಾರಗಳಲ್ಲಿ ದಿನಾಂಕ 23, 24, 25 ರಂದು ಲಸಿಕೆ ಹಾಕಿ ನಿಗದಿತ ಗುರಿ ತಲುಪಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. *ಜಾಗೃತಿಗಾಗಿ ನಿರಂತರ :* ಜಾಗೃತಿಗಾಗಿ ಶಾಲಾ ಮಕ್ಕಳಿಂದ ಜಾಥಾ, ಪ್ರಮುಖ ಸ್ಥಳಗಳಲ್ಲಿ ಪ್ಲೆಕ್ಸ್ ಅಳವಡಿಕೆ, ತ್ಯಾಜ್ಯ ವಿಲೇವಾರಿ ವಾಹನಗಳು ಆಟೋಗಳ ಮೂಲಕ ಜಿಂಗಲ್ಸ್‌ಗಳು, ಟಾಂಟಾಂ, ಸಾಮಾಜಿಕ ಜಾಲತಾಣಗಳ ಮೂಲಕ ರೀಲ್ಸ್, ಸಂದೇಶಗಳನ್ನು ನಿರಂತರವಾಗಿ ಬಿತ್ತರಿಸಲಾಗುತ್ತಿದೆ. *ಕ್ಯೂ ಆರ್‌ಕೋಡ್ ಬಳಕೆ* ನಗರ ಪ್ರದೇಶಗಳ ಬೂತ್ ಗುರ್ತಿಸಲು ಕ್ಯೂ ಆರ್ ಕೋಡ್‌ನ್ನು ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.*ಜೂನ್ 28 ರಂದು ವಿಧ್ಯುಕ್ತವಾಗಿ ಚಾಲನೆಗೆ ಸಿದ್ದತೆ:* ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಮಾನ್ಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಪಂ, ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಗಣ್ಯರು ರಾಯಚೂರು ನಗರದ ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಇಬಿ ಕಾಲೋನಿಯಲ್ಲಿ ಹಾಗೂ ಜಿಲ್ಲೆಯ ಅಯಾ ತಾಲೂಕುಗಳಲ್ಲಿ ಮಾನ್ಯ ಶಾಸಕರು ಹಾಗೂ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಿ ವಿಧ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.





Recent Comments