Wednesday, July 29, 2026
Google search engine
Homeಮುಖ್ಯಾಂಶಗಳುಜು.೨೮ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ- ಜೀವಮಾನ ಸಾಧನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ

ಜು.೨೮ರಂದು ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ- ಜೀವಮಾನ ಸಾಧನೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ

ರಾಯಚೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ಮತ್ತು ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜು.೨೮ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸುವರು. ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಪ್ರಶಸ್ತಿ ಪ್ರದಾನ ಮಾಡುವರು. ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡುವರು. ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಮಾನಪ್ಪ ವಜ್ಜಲ್, ಕರೆಮ್ಮ ನಾಯಕ, ಹಂಪಯ್ಯ ನಾಯಕ, ಬಸನಗೌಡ ತುರ್ವಿಹಾಳ, ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ್, ಬಸನಗೌಡ ಬಾದರ್ಲಿ, ಶರಣಗೌಡ ಬಯ್ಯಾಪುರ, ಜಿಲ್ಲಾಧಿಕಾರಿ ಪೂವಿತಾ ಎಸ್, ಎಸ್‌ಪಿ ಅರುಣಾಂಗ್ಷು ಗಿರಿ, ಜಿಪಂ ಸಿಇಒ ಈಶ್ವರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ರಾಜ್ಯ ಸಮಿತಿ ಸದಸ್ಯರಾದ ಬಸವರಾಜ್ ನಾಗಡದಿನ್ನಿ, ಅರವಿಂದ ಕುಲಕರ್ಣಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ಉಪನಿರ್ದೇಶಕ ಡಾ.ಸುರೇಶ ಜಿ. ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ವಿವರಿಸಿದರು.ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತರಾದ ಬಿ.ವೆಂಕಟಸಿಂಗ್ ಅವರಿಗೆ ವಿಶೇಷ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಸಂಘದಿಂದ ಮೂವರು ಹಿರಿಯ ಪತ್ರಕರ್ತರಿಗೆ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ಹಾಗೂ ೧೧ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ವಿತರಣೆ ಮಾಡಲಾಗುತ್ತಿದೆ. ದಿ.ಶ್ರೀ ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರವಾಣಿ ಪ್ರಾಯೋಜಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿ ರಂಗನಾಥ ಚಕ್ರವರ್ತಿ ಹಿರಿಯ ವರದಿಗಾರ ಈ ನಾಡು ಪತ್ರಿಕೆ ರಾಯಚೂರು ಇವರಿಗೆ, ಕಂಪಿಲವಾಣಿ ಪ್ರಾದೇಶಿಕ ಕನ್ನಡ ದಿನಪತ್ರಿಕೆ ರಾಯಚೂರು ಪ್ರಾಯೋಜಿತ ಪತ್ರಿಕಾ ರಂಗದ ಭೀಷ್ಮ ದಿ. ಕೆ. ಶಾಮರಾವ್ ಸ್ಮರಣಾರ್ಥ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಗೆ ಶಿವಮೂರ್ತಿ ಹಿರೇಮಠ , ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಪ್ರಾಯೋಜಿತ ದಿ.ಶ್ರೀ ಶಿವಶಂಕರಗೌಡ ಪಾಟೀಲ್ ಯದ್ದಲದಿನ್ನಿ ಸ್ಮರಣಾರ್ಥ ವಿಶೇಷ ಪ್ರಶಸ್ತಿಯನ್ನು ವಿರೇಶ ಸೌದ್ರಿ ವರದಿಗಾರರು, ವಿಜಯವಾಣಿ, ಮಸ್ಕಿ ಇವರಿಗೆ ನೀಡಿ ಗೌರವಿಸಲಾಗುತ್ತಿದೆ ಎಂದರು.ಇನ್ನೂ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿಯನ್ನು ರಾಮಕೃಷ್ಣ ದಾಸರಿ, ಜಿಲ್ಲಾ ವರದಿಗಾರ, ಕನ್ನಡ ಪ್ರಭ, ರಾಯಚೂರು ಇವರಿಗೆ ಸುದ್ದಿಮೂಲ ಪ್ರಾಯೋಜಿತ ದಿ.ಪ್ರಕಾಶ ದಿನ್ನಿ ಸ್ಮಾರಕ ಪ್ರಶಸ್ತಿ, ಚಂದಪ್ಪ ದೋರನಹಳ್ಳಿ, ಜಿಲ್ಲಾ ವರದಿಗಾರ, ಬಿ ಟಿವಿ, ರಾಯಚೂರು ಇವರಿಗೆ ಸುದ್ದಿಮೂಲ ಪ್ರಾಯೋಜಿತ ಗ್ರಾಮೀಣ ವರದಿಗಾರಿಕೆಗೆ ನೀಡುವ ಪ್ರಶಸ್ತಿ, ಸುರೇಶಗೌಡ ತಾಲ್ಲೂಕ ವರದಿಗಾರ ವಿಜಯ ಕರ್ನಾಟಕ, ದೇವದುರ್ಗ ಇವರಿಗೆ ದಿ.ನರಸಿಂಹಚಾರ್ಯ ಗುಡಿ ಸ್ಮರಣಾರ್ಥ ಪ್ರಶಸ್ತಿ, ಹನುಮಂತ ಕನ್ನಾಳ, ತಾಲೂಕು ವರದಿಗಾರ, ಉದಯಕಾಲ, ಲಿಂಗಸುಗೂರು ಇವರಿಗೆ ದಿ.ಪ್ರಹ್ಲಾದ್ಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿ, ರಾಜಶೇಖರ್, ಸಂಪಾದಕ, ಜಂಬೂ ದ್ವೀಪ ಮಾನ್ವಿ, ಇವರಿಗೆ ದಿ.ಮಹಾದೇವಮ್ಮ ಬಸವರಾಜ ಸ್ವಾಮಿ ಸ್ಮರಣಾರ್ಥ ಪ್ರಶಸ್ತಿ, ಆದೇಶ ನಗನೂರು, ವರದಿಗಾರ, ಬೆಂಕಿ ಬೆಳಕು, ಕವಿತಾಳ ಇವರಿಗೆ ಸ್ಪಂಧನಾ ಸಂಸ್ಥೆ ನಂದಿಕೋಲಮಠ ಪ್ರಾಯೋಜಿತ ಪ್ರಶಸ್ತಿ, ಈಶಪ್ಪ ಬೈಲ್ ಮರ್ಚೆಡ್, ಪ್ರಧಾನ ಸಂಪಾದಕ, ಕಲ್ಯಾಣ ಸಂಜೆ ಮಾನ್ವಿ ಇವರಿಗೆ ಲಿಂಗಸುಗೂರು ಶ್ರೀ ಸಿದ್ದರಾಮಪ್ಪ ಕೆಂಭಾವಿ ಸ್ಮರಣಾರ್ಥ ಶಿವರಾಜ ಕೆಂಭಾವಿ ಪ್ರಾಯೋಜಿತ ಪ್ರಶಸ್ತಿ, ಬದ್ರಿನಾಥ ವರದಿಗಾರ, ಸಂಯುಕ್ತ ಕರ್ನಾಟಕ, ಬಳಗಾನೂರು ಇವರಿಗೆ ದಿ.ಈಶ್ವರಮ್ಮ ನರಸಪ್ಪ ಜಲ್ದಾರ್ ಸ್ಮರಣಾರ್ಥ ಪ್ರಶಸ್ತಿ, ಬೀರಪ್ಪ, ತಾಲ್ಲೂಕ ವರದಿಗಾರ, ಬಳ್ಳಾರಿ ಬೆಳಗಾಯಿತು, ಸಿಂಧನೂರು ಇವರಿಗೆ ದಿ.ಪ್ರಲ್ಹಾದಾಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿ, ಶಿವಕುಮಾರ, ಕ್ಯಾಮರಾಮೆನ್ ಮೇಘಾ ಚಾನಲ್ ಇವರಿಗೆ ಸಿದ್ದಪ್ಪ ಹಳ್ಳೂರು ಸಿರವಾರ ಪ್ರಾಯೋಜಿತ ಪ್ರಶಸ್ತಿ, ಮಂಜುನಾಥ ಎತ್ತಿನಮಾಳಗಿ, ಟೈಮ್ಸ್ ಆಫ್ ಇಂಡಿಯಾ ಜಾಹೀರಾತು ಸಹಾಯಕ ವ್ಯವಸ್ಥಾಪಕ ರಾಯಚೂರು ಇವರಿಗೆ ದಿ.ಎಂ.ರಜನಿ ಸತ್ಯವತಿ ಜೇಮಸಿಂಗ್ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈಚೆಗೆ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.  ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ, ಈ ಬಾರಿ ಗಿಲ್ಡ್ ನಿಂದ ಏಳು ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ದಿ:ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಯೋಜಿತ ಅತ್ಯುತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿ – ಮಂಜುನಾಥ ಸಾಲಿಜಿಲ್ಲಾ ವರದಿಗಾರರು, ವಿಜಯ ಕರ್ನಾಟಕ ಇವರಿಗೆ ದಿ: ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಯೋಜಿತ ಅತ್ಯುತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿ – ವಾಗೇಶ್ ಪಂಡಿತಾರಾಧ್ಯ ವಿ.ಪಾಟೀಲಜಿಲ್ಲಾ ವರದಿಗಾರರು, ಹೊಸ ದಿಗಂತ ಇವರಿಗೆ, ದಿ:ದಿದ್ದಿಗಿ ಕಿಶನ್ ರಾವ್ ಸ್ಮರಣಾರ್ಥ ಅತ್ಯುತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿ: ಗೌಡಪ್ಪ ಗೌಡಜಿಲ್ಲಾ ವರದಿಗಾರರು, ಈಶಾನ್ಯ ಟೈಮ್ಸ್ ಇವರಿಗೆ, ದಿ:ರಘುನಾಥ ಸಿಂಗ್ ಬೊಮ್ಮನಾಳ ಸ್ಮರಣಾರ್ಥ ಅತ್ಯುತ್ತಮ ಕ್ಯಾಮೆರಾಮನ್ ವಾರ್ಷಿಕ ಪ್ರಶಸ್ತಿ- ದುರ್ಗೇಶ ಪೂಜಾರಿ ಕ್ಯಾಮೆರಾಮನ್, ರಿಪಬ್ಲಿಕ್ ಕನ್ನಡ ಇವರಿಗೆ, ದಿ: ಕೆ.ಅಡಿವೆಪ್ಪ ಸ್ಮರಣಾರ್ಥ ಕೆ.ಸತ್ಯನಾರಾಯಣ ಪ್ರಾಯೋಜಿತ ಅತ್ಯುತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿ -ಖ್ವಾಜಾ ಹುಸೇನ್,ಜಿಲ್ಲಾ ವರದಿಗಾರರು, ಈಶಾನ್ಯ ವಾರ್ತೆ ಇವರಿಗೆ, ದಿ:ಹನುಮಂತ್ರಾಯ ಗೌಡ ಸ್ಮರಣಾರ್ಥ ಕೆ.ಶಿವನಗೌಡ ನಾಯಕ ಪ್ರಾಯೋಜಿತ ಅತ್ಯುತ್ತಮ ವರದಿಗಾರ ವಾರ್ಷಿಕ ಪ್ರಶಸ್ತಿ – ಶಶಿಧರ ಅಂಗಡಿ, ಜಿಲ್ಲಾ ವರದಿಗಾರರು, ಪ್ರಜಾಪ್ರಗತಿ ಇವರಿಗೆ, ಪ್ರಕಾಶ ಮಸ್ಕಿ ಪ್ರಾಯೋಜಿತ ಅತ್ಯುತ್ತಮ ಕ್ಯಾಮೆರಾಮನ್ ವಾರ್ಷಿಕ ಪ್ರಶಸ್ತಿ- ವಾಸುದೇವ ಎಸ್. ಕ್ಯಾಮೆರಾಮನ್, ಟಿವಿ9 ಇವರಿಗೆ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ರಾಜ್ಯ ಸಮಿತಿ ಸದಸ್ಯ ಬಸವರಾಜ್ ನಾಗಡದಿನ್ನಿ, ಉಪಾಧ್ಯಕ್ಷ ಮಹಾನಂದ ನಾಯಕ, ಖಜಾಂಚಿ ಮಲ್ಲಿಕಾರ್ಜುನಯ್ಯ, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ್ ಗೋಷ್ಟಿಯಲ್ಲಿದ್ದರು.

RELATED ARTICLES
- Advertisment -
Google search engine

Most Popular

Recent Comments