ರಾಯಚೂರು,ಜು.೭- ಮಾಜಿ ಸಚಿವ ಕೆ.ಶಿವನಗೌಡ ನಾಯಕ ಇವರ ೪೯ ಹುಟ್ಟು ಹಬ್ಬದಂಗವಾಗಿ ಜು. ೧೪ ರಂದು ಕವಿತಾಳ ಪಟ್ಟಣದ ಮಸ್ಕಿ ಕ್ರಾಸ ಬಳಿ ಸಂಕಲ್ಪ ಸಮಾಗಮ ಸಮಾವೇಶ ಆಯೋಜಿಸಿರುವದಾಗಿ ಕೆಸಿಎನ್ ಜನಕಲ್ಯಾಣ ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ತಿಮ್ಮಾರೆಡ್ಡಿ ಬೋಗಾವತಿ ಹೇಳಿದರು.ಅವರಿಂದು ಮಾಧ್ಯಮ ಗಳಿಗೆ ಮಾಹಿತಿ ನೀಡಿ ಸರಿ ಸುಮಾರು ೨೦ ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಲ್ಬುರ್ಗಿ,ಯಾದಗಿರಿ, ಕೊಪ್ಪಳ ಸೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಅಭಿಮಾನಿಗಳು ಭಾಗವಹಿಸಲಿದ್ದಾರೆ. ನವಲಿ ಸಮನಾಂತರ ಜಲಾಶಯ, ತಿಂತಿಣಿಬ್ರಿಜ್ ಬಳಿ ಜಲಾಶಯ ನಿರ್ಮಾಣ ಮತ್ತು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಒತ್ತಾಯಿಸಿ ಹೋರಾಟ ನಡೆಸಲು ಸಮಿತಿ ನಿರ್ಧರಿಸಲಿದೆ.ಸಮಾವೇಶವನ್ನು ಶ್ರೀ ವಿನಯ ಗುರುಜಿ ಉದ್ಘಾಟಿಸಲಿದ್ದಾರೆ. ಅನೇಕ ಹರಗುರು ಚರಮೂರ್ತಿಗಳ ಉಪಸ್ಥಿತಿ ಯಲ್ಲಿ ಸಮಾವೇಶ ನಡೆಯಲಿದೆ.ಪಕ್ಷಾತೀತವಾಗಿ ೨೦೦೯ ರಿಂದ ಕೆಸಿಎನ್ ಜನ ಕಲ್ಯಾಣ ಸಮಿತಿ ಜನಮುಖಿ ಕಾರ್ಯಮಾಡುತ್ತಲೇ ಬಂದಿದೆ.ಈ ಬಾರಿ ಜಿಲ್ಲೆಯ ಜನರ ಬೇಡಿಕೆಗಳಿಗೆ ಧ್ವನಿಯಾಗಲು ನಿರ್ಧರಿಸಲಾಗಿದೆ ಎಂದರು.






Recent Comments