Wednesday, July 29, 2026
Google search engine
HomeBlogಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಬರ ಪರಸ್ಥಿತಿ ಅವಲೋಕನ: ಬೆಳೆವಿಮೆ ಕುರಿತು ಜಾಗೃತಿ ಮೂಡಿಸಲು ಸೂಚನೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಿಂದ ಬರ ಪರಸ್ಥಿತಿ ಅವಲೋಕನ: ಬೆಳೆವಿಮೆ ಕುರಿತು ಜಾಗೃತಿ ಮೂಡಿಸಲು ಸೂಚನೆ

ರಾಯಚೂರು ಜುಲೈ 4- ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇರುವ ಕಾರಣ ಬಿತ್ತಿದ ಬೆಳೆಗಳ ಪರಿಸ್ಥಿತಿಯನ್ನು ಅವಲೋಕಿಸಲು ರಾಯಚೂರು ತಾಲೂಕಿನ ಮನ್ಸಲಾಪೂರು ಗ್ರಾಮದಲ್ಲಿ ಬಿತ್ತನೆ ಆಗಿರುವ ಹತ್ತಿ ಬೆಳೆಗಳನ್ನು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಎಸ್. ನಕುಲ್ಅವರು ಭೇಟಿ ಪರಿಶೀಲನೆ ಮಾಡಿದರು.ಪ್ರಸ್ತುತ ಮುಂಗಾರು ಹಂಗಾಮಿನ ಜೂನ್ ಮಾಹೆಯವರೆಗೆ ಜಿಲ್ಲೆಯಲ್ಲಿ ಶೇ.22 ರಷ್ಟು ಮಳೆ ಕೊರತೆ ಇದ್ದು, ಮಳೆಯ ಸಮಾನವಾಗಿ ಹಂಚಿಕೆ ಆಗದೆ ಇರುವ ಕಾರಣ ತೇವಾಂಶ ಕೊರತೆಯಿಂದ ಅಸಮರ್ಪಕವಾಗಿ ಮೊಳಕೆ ಒಡೆದಿರೂವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಚೌಹಾಣ್ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.ಈ ಬಾರಿ ಹವಾಮಾನ ಮುನ್ಸೂಚನೆಯನ್ವಯ ಬರದ ಪರಿಸ್ಥಿತಿ ನಿರ್ಮಾಣವಾದ ಪಕ್ಷದಲ್ಲಿ ರೈತರಿಗೆ ಬೆಳೆ ವಿಮೆ ಯೋಜನೆ ಸಹಾಯ ಹಸ್ತವಾಗುತ್ತದೆ. ಆದ್ದರಿಂದ ರೈತರಲ್ಲಿ ಬೆಳೆ ವಿಮೆ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪೂವಿತಾ ಎಸ್., ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ, ಮಹಾನಗರ ಪಾಲಿಕೆ ಆಯುಕ್ತಜೂಬಿನ್ ಮೋಹಪಾತ್ರ, ಸಹಾಯಕ ಕೃಷಿ ನಿರ್ದೇಶಕನಹೀಂ ಹುಸೇನ್, ರಾಯಚೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ದೀಪಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

RELATED ARTICLES
- Advertisment -
Google search engine

Most Popular

Recent Comments