ಕಲ್ಬುರ್ಗಿ ಜುಲೈ: 17-ಮಾಹಿತಿ ನೀಡಲು ನಿರ್ಲಕ್ಷ ತೋರಿ ಆಯೋಗದ ವಿಚಾರಣೆಗಳಿಗೆ ಗೈರಾದ ಪಂಚಾಯತ ರಾಜ್ ಇಂಜನೀಯರ್ ಕಾಳಗಿ ಉಪ ವಿಭಾಗದ ಸಹಾಯಕ ಕಾರ್ಯ ಪಾಲನಾ ಅಭಿಯಂತರ ರಾಜಕುಮಾರಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ 20 ಸಾವಿರ ದಂಡ ವಿಧಿಸಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಪ್ರಕಟಣೆ ತಿಳಿಸಿದೆ.2021-22 ರ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀನಾಥ ಎನ್ನುವರು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಯಾದ ಕೋಡ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳ ಪ್ರಾಥಮಿಕ ಶಾಲೆ ಛಾವಣಿ ದುರಸ್ಥಿ ಗಕಾಮಗಾರಿಯ ಅನುದಾನದ ವಿವರ, ಬಿಲ್ ಪಾವತಿಸೇರಿ ಇದಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಶ್ರೀನಾಥ ಕೋಡ್ಲಿ ಎನ್ನುವರು ದಿನಾಂಕದ:26.02.2024 ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲನಾ ಅಭಿಯಂತರ ಕಛೇರಿ ಪಂಚಾಯತ್ ರಾಜ್ ಇಂಜನೀಯರಿಂಗ್ ಕಾಳಗಿ ಉಪ ವಿಭಾಗಕ್ಕೆ ಮಾಹಿತಿ ಹಕ್ಕು ಅಧಿನಿಯ 2005ರ ಕಲಂ 6(1) ರಲ್ಲಿ ಎರಡು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.ಆದರೆ, ಮೇಲ್ಮನವಿದಾರರು ಕೋರಿದ ಮಾಹಿತಿ ನಿಗಧಿತ ಅವಧಿಯಲ್ಲಿ ನೀಡದ ಕಾರಣ ಮೇಲ್ಮನವಿದಾರ ಶ್ರೀ ನಾಥ ಕೋಡ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ಕಲಂ 19(1) ರಡಿ ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಪಂಚಾಯತ ರಾಜ್ ಕಲ್ಬುರ್ಗಿ ವಿಭಾಗದ ಕಾರ್ಯಪಾಲನಾ ಅಭಿಯಂತರಿಗೆ 15.04.2024 ರಂದು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೂ ಮೇಲ್ಮನವಿದಾರರಿಗೆ ಕೋರಿದ ಮಾಹಿತಿ ದೊರೆಯೇದ ಕಾರಣ ಮೇಲ್ಮನವಿದಾರ ಶ್ರೀನಾಥ ಕೋಡ್ಲಿ ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(3) ರಡಿ ಕರ್ನಾಟಕ ಮಾಹಿತಿ ಆಯೋಗ ಕಲ್ಬುರ್ಗಿ ಪೀಠದಲ್ಲಿ ಮುಂದೆ ದ್ವೀತಿಯ ಮೇಲ್ಮನವಿ ದಿನಾಂಕ:06.07.2024 ರಂದು ಸಲ್ಲಿಸಿದ್ದರು. ಸದರಿ ಪ್ರಕರಣ ಕರ್ನಾಟಕ ಮಾಹಿತಿ ಆಯೋಗದ ವಿಚಾರಣೆಗೆ ಕೈಗೆತ್ತಿಕೊಂಡ ಕಲ್ಬುರ್ಗಿ ಪೀಠದ ಆಯುಕ್ತ ಬಿ. ವೆಂಕಟ ಸಿಂಗ್ ಅವರು ಪ್ರತಿವಾದಿಗಳು ವಿಚಾರಣೆಗೆ ಹಾಜರಾಗುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ ರಾಜ ಕುಮಾರ ಸಹಾಯಕ ಕಾರ್ಯಪಾಲನಾ ಅಭಿಯಂತರರಿಗೆ ನೀಡಿದ ನೋಟಿಸಗೆ ಸ್ವಪಂದಿಸಿದೇ ದಿನಾಂಕ:24.01.2026, ದಿನಾಂಕ24.02.2026 ಮತ್ತು ದಿನಾಂಕ:15.07.2026 ರಂದು ನಡೆದ ವಿಚಾರಣೆಗೆ ಗೈರು ಹಾಜರಾಗಿದಲ್ಲದೆ ಮೇಲ್ಮನವಿದಾರರು ಕೋರಿದ ಮಾಹಿತಿ ನೀಡದೆ ನೀರ್ಲಕ್ಷ ಮಾಡಿದ ಸಾರ್ವಜನಿಕ ಮಾಹಿತಿ ಅಧಿಕಾರಿ ರಾಜಕುಮಾರ ಮಾಹಿತಿ ನೀಡಲು ನಿರ್ಲಕ್ಷ ಹಾಗೂ ವಿಚಾರಣೆಗೆ ಗೈರು ಹಾಜರಾಗುವ ಮೂಲಕ ಆಯೋಗದ ಆದೇಶ ಪಾಲನೆ ಮಾಡದ ಕಾರಣ ಇವರಿಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ತಲಾ 10 ಸಾವಿರ ದಂತೆ ಒಟ್ಟು 20 ಸಾವಿರ ದಂಡ ವಿಧಿಸಿ ಕಲ್ಬುರ್ಗಿ ಪೀಠ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ ಸಿಂಗ್ ಆದೇಶ ಮಾಡಿದ್ದಾರೆ.ಮುಂದುವರೆದು, ಮೇಲ್ಮನವಿದಾರರಿಗೆ ಆಯೋಗದ ವಿಧಿಸಿದ ದಂಡ ಪಾವತಿಸಿ ಮುಂದಿನ ವಿಚಾರಣೆಗೆ ಹಾಜರಾಗಿ ರಶೀದಿ ಸಲ್ಲಿಸಬೇಕು ಹಾಗೂ ಮೇಲ್ಮನವಿದಾರರು ಕೋರಿದ ಮಾಹಿತಿ ನೀಡಿ ಅವರಿಗೆ ನೀಡಿದ ಮಾಹಿತಿ ಮತ್ತು ಸ್ವೀಕೃತಿ ಪತ್ರ ಆಯೋಗಕ್ಕೆ ಸಲ್ಲಿಸಿ, ಮುಂದಿನ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಲು ರಾಜಕುಮಾರ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲನಾ ಅಭಿಯಂತರರಿಗೆ ಮಾಹಿತಿ ಹಕ್ಕು ಅಧಿನಿಯಮ ಕಲಂ 18(3) ನಲ್ಲಿ ಅದೇಶಿಸಿ ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ ಕಲಂ 20(2) ರಲ್ಲಿ ಅವರಿಗೆ ಕೆ.ಸಿ.ಎಸ್.ಆರ್. ರಡಿ ಅನ್ವಯಿಸುವ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ. ಮೇಲ್ಮನವಿದಾರರ ಕೋರಿದ ಮಾಹಿತಿ ಕೋಡಿಸಲು ಮತ್ತು ಪ್ರತಿವಾದಿ ಗೆ ವಿಧಿಸಿದ ದಂಡ ಪಾವತಿಗೆ ಕ್ರಮವಹಿಸಲು ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ ಕಾರ್ಯಪಾಲನಾ ಅಭಿಯಂತರರಾದ ರಜನಿ ಕಾಂತ ಅವರಿಗೆ ಮಾಹಿತಿ ಹಕ್ಕು ಅಧಿಯಮ 18(3) ರಡಿ ನಿದೇಶನ ನೀಡಿ ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿಇಯಮ ಕಲಂ 20(2) ರಡಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದೆ. ಸಹಾಯಕ ಕಾರ್ಯಪಾಲನಾ ಅಭಿಯಂತರರು ಮೇಲ್ಮನವಿದಾರರು ಕೋರಿದ ಮಾಹಿತಿ ನೀಡಲು ನಿರ್ಲಕ್ಷ ಮಾಡಿದಲ್ಲದೇ ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವ ರಾಜ ಕುಮಾರ, ಸಾರ್ವಜನಿಕ ಮಾಹಿತಿ ಅಧಿಕಾರಿ ಅಭಿಯಂತರಿಗೆ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರ ಮತ್ತು ಕಾರ್ಯಪಾಲನಾ ಅಭಿಯಂತ ರಜನಿ ಕಾಂತ್ ಅವರು ಮುಂದಿನ ವಿಚಾರಣೆಗೋಳ ಗಾಗಿ ದಂಡ ಪಾವತಿಸಿ ಹಾಗೂ ಮೇಲ್ಮನವಿದಾರರಿ ಗೆ ಮಾಹಿತಿ ನೀಡಿ ಮುಂದಿನ ವಿಚಾರಣೆಗೆ ಮೇಲಿನ ಇಬ್ಬರು ಅಧಿಕಾರಿಗಳು ಖುದ್ದಾಗಿ ರಾಜರಾಗಲು -ಸೂಚನೆ ನೀಡುವಂತೆ ಕಲ್ಬುರ್ಗಿ ಜಿ ಪಂ ಮುಖ್ಯ ಕಾರ್ಯನಿರ್ವಕಾ ಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರಿಗೆ ಮಾಹಿತಿ ಹಕ್ಕು ಅಧಿನಿಯಮ ಕಲಂ 19(8) ರಲ್ಲಿ ನಿರ್ದೇಶನ ನೀಡಿದೆ.





Recent Comments