Tuesday, July 28, 2026
Google search engine
Homeರಾಯಚೂರುರಾಯಚೂರು ನಗರಕಲಾವಿದರಿಗೆ ರಂಗಮಂದಿರದ ಬಾಡಿಗೆ ಧರ ಕಡಿಮೆ ಮಾಡಲು ಕಲಾವಿದರ ಆಗ್ರಹ

ಕಲಾವಿದರಿಗೆ ರಂಗಮಂದಿರದ ಬಾಡಿಗೆ ಧರ ಕಡಿಮೆ ಮಾಡಲು ಕಲಾವಿದರ ಆಗ್ರಹ

ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದ ಬಾಡಿಗೆ ಹಣ ಕಡಿಮೆ ಗೊಳಿಸಲು ಕಲಾವಿದರು ಆಗ್ರಹಿಸಿ ಮನವಿ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ, ನೃತ್ಯ, ನಾಟಕ, ಬಯಲಾಟಗಳು ಮತ್ತು ಸಾಹಿತ್ಯ ಗೋಷ್ಠಿಗಳು. ಅನೇಕ ವರ್ಷಗಳಿಂದ ಪಂ. ಸಿದ್ಧರಾಮ ಜಂಬಲದ್ದಿನ್ನಿ ರಂಗ ಮಂದಿರದಲ್ಲಿ ನಿರಂತರವಾಗಿ ನಡೆಸುತ್ತಾ ಬಂದಿದ್ದು. ಈ ಹಿಂದೆ ನಮ್ಮ ರಂಗಮಂದಿರದ ಬಾಡಿಗೆ ದರ ಕಲಾವಿದರಿಗೆ ಮತ್ತು ಸಾಹಿತಿಗಳಿಗೆ ಮುಂಗಡ ಬಾಡಿಗೆ ಠೇವಣಿ ಸೇರಿ ರೂ. 4025 ರೂಪಾಯಿಗಳು. ಅರ್ಧ ದಿನಕ್ಕೆ, ಸಮಯ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಬಾಡಿಗೆಯಾಗಿತ್ತು.ಈ ಠೇವಣಿ ಹಣದಲ್ಲಿ ಕಾರ್ಯಕ್ರಮ ಮುಗಿದ ನಂತರ ರಂಗಮಂದಿರ ಬಾಡಿಗೆ ಮತ್ತು ವಿದ್ಯುತ್ ಬಿಲ್ ಸೇರಿ ಕಡಿತಗೊಂಡು ವಾಪಸ್ ರೂ. 1100 ರೂಪಾಯಿಗಳು ಸಂಘ ಸಂಸ್ಥೆಗಳ ಖಾತೆಗೆ ಜಮಾ ಮಾಡಿಸುತ್ತಿದ್ದೆವು. ಆದರೆ ಈಗ ರಂಗ ಮಂದಿರ ನವೀಕರಣದ ನಂತರ ಬಾಡಿಗೆ, ಎಸಿಗೆ ಬೆಳಿಗ್ಗೆ 9ರಿಂದ ರಾತ್ರಿ 9ವರೆಗೆ ಪೂರ್ಣ ದಿನಕ್ಕೆ ರೂ. 10 ಸಾವಿರ ರೂಪಾಯಿಗಳು, ವಿದ್ಯುತ್ ಧರ ರೂ. 3 ಸಾವಿರ ರೂಪಾಯಿಗಳು, ಎಸಿ ಅರ್ಧ ದಿನಕ್ಕೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ ೩ಗಂಟೆವರೆಗೆ, ರೂ. 5 ಸಾವಿರ ರೂಪಾಯಿಗಳು, ಮತ್ತು ವಿದ್ಯುತ್ ರೂ. 3 ಸಾವಿರ ರೂಪಾಯಿಗಳು, ವೆಚ್ಚ ಮಾಡುತ್ತಿದ್ದಾರೆ. ಅದೇ ರೀತಿ ಹವಾನಿಯಂತ್ರಿತವಲ್ಲದ ರಂಗಮಂದಿರದ ಬಾಡಿಗೆ ಪೂರ್ಣ ದಿನಕ್ಕೆ ರೂ. 7 ಸಾವಿರ ರೂಪಾಯಿಗಳು, ವಿದ್ಯುತ್ ಧರ ರೂ.3 ಸಾವಿರ ರೂಪಾಯಿಗಳು, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ವರೆಗೆ ಮಾತ್ರ, ಹಾಗೂ ಹವಾ ನಿಯಂತ್ರಿತವಲ್ಲದ ಅರ್ಧ ದಿನಕ್ಕೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ರಿಂದ 5 ತಾಸಿಗೆ, ಬಾಡಿಗೆ ರೂ. 4 ಸಾವಿರ ರೂಪಾಯಿಗಳು. ಮತ್ತು ವಿದ್ಯುತ್ ಧರ ರೂ. 3 ಸಾವಿರ ರೂಪಾಯಿಗಳು ಭರಿಸಬೇಕು.ನಮ್ಮ ರಾಯಚೂರಿನ ಸಂಗೀತ ನೃತ್ಯ, ನಾಟಕ, ಬಯಲಾಟ ಸಾಂಸ್ಕೃತಿಕ ಕಲಾವಿದರು ರಂಗ ಮಂದಿರದ ಬಾಡಿಗೆ ದುಬಾರಿಯಾಗಿರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾಡಲು ಆಗುತ್ತಿಲ್ಲ, ಈ ಬಾಡಿಗೆ ಕಲಾವಿದರಿಗೆ ಬಹಳ ಹೊರೆಯಾಗುತ್ತದೆ, ಕಲಾವಿದರ ಜೀವನ ಬಹಳ ಕಷ್ಟಕರವಾಗಿದೆ. ಒಬ್ಬ ಕಲಾವಿದನು ಕಾರ್ಯಕ್ರಮವನ್ನು ಆಯೋಜನೆ ಮಾಡಿ ವೇದಿಕೆ ಮೇಲೆ ಪ್ರದರ್ಶನ ಮಾಡಲು ಬಹಳ ಕಷ್ಟ ಪಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ಕಲಾವಿದರು ಮತ್ತು ಸಾಹಿತಿಗಳಿಗೆ ಮಾತ್ರ ತಾವುಗಳು ವಿದ್ಯುತ್ ಧರವನ್ನು ರದ್ದುಗೊಳಿಸಬೇಕು, ಹವಾ ನಿಯಂತ್ರಿತವಲ್ಲದ, ನಾನ ಎಸಿರಂಗಮಂದಿರದ ಬಾಡಿಗೆ ಪೂರ್ಣ ದಿನಕ್ಕೆ ರೂ. 5ಸಾವಿರ ರೂಪಾಯಿಗಳು ನಿಗದಿ ಮಾಡಬೇಕು, ನಮ್ಮ ಕಲಾವಿದರಿಗೆ ವಿದ್ಯುತ್ ಧರವು ಹೊರೆಯಾಗುತ್ತಿದ್ದು ಇದನ್ನು ತೆಗೆದು ಹಾಕಬೇಕು, ರಂಗಮಂದಿರದ ಬಾಡಿಗೆ ಹವಾನಿಯಂತ್ರಿತ ಎಸಿಗೆ ಅರ್ಧ ದಿನಕ್ಕೆ ರೂ. 4ಸಾವಿರ ರೂಪಾಯಿಗಳು ನಿಗದಿ ಮಾಡಬೇಕು. ನಮ್ಮ ಕಲಾವಿದರಿಗೆ ರಂಗಮಂದಿರ ಬಾಡಿಗೆ ಪೂರ್ಣ ದಿನಕ್ಕೆ ಹವಾ ನಿಯಂತ್ರಿತ ಎಸಿಗೆ ರೂ. ೮ ಸಾವಿರ ರೂಪಾಯಿಗಳು ನಿಗದಿ ಮಾಡಬೇಕು.ರಂಗಮಂದಿರದ ಒಳಗಡೆ ಸ್ಟೇಜ್ ಮೇಲೆ ಗಣ್ಯ ವ್ಯಕ್ತಿಗಳು ಆಶೀನರಾಗುವ ವೇದಿಕೆಯಲ್ಲಿ ಎಡ ಮತ್ತು ಬಲ ಬದಿಯಲ್ಲಿ ಫ್ಯಾನುಗಳನ್ನು ಅಳವಡಿಸಬೇಕು, ಅದೇ ರೀತಿಯಾಗಿ, ಸರ್ಕಾರಿ ಬಾಲಕರ ಪದವಿಶಾಲೆ ಪಕ್ಕದಲ್ಲಿ ಹಾದು ಹೋಗುವ ರಸ್ತೆಯಲ್ಲಿ ರಂಗ ಮಂದಿರ ತಿರುವಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ, ನೃತ್ಯ, ನಾಟಕ, ಬಯಲಾಟಗಳು ಮುಂತಾದ ಕಾರ್ಯಕ್ರಮಗಳು ಪ್ರಚಾರ ಮಾಡಲು ಫ್ಲೆಕ್ಸ್ ಬ್ಯಾನರ್ ಹಾಕುವುದಕ್ಕೆ, ಶಾಶ್ವತವಾದ ಕಬ್ಬಿಣದ ಬೋರ್ಡ್ ಅಳವಡಿಸಿ ಕಲಾವಿದರಿಗೆ ಕಾರ್ಯಕ್ರಮಗಳ ಪ್ರಚಾರಕ್ಕೆ ಅನುಕೂಲವಾಗುವಂತೆ ಅವಕಾಶ ಮಾಡಿಕೊಡಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಮಾಡಲು ಈ ನಮ್ಮ ಕಲಾವಿದರಿಗೆ ರಂಗಮಂದಿರ ಬಾಡಿಗೆಯನ್ನು ಕಡಿಮೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ಹಿರಿಯ ರಂಗ ಕಲಾವಿದರಾದ ವಿ.ಎನ್. ಅಕ್ಕಿ ಹಾಗೂ ರಾಯಚೂರು ಜಿಲ್ಲಾ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಒಕ್ಕೂಟ, ರಾಯಚೂರು ವತಿಯಿಂದ ಜಿಲ್ಲಾಧಿಕಾರಿ ಪೂರ್ವಿತಾ ಎಸ್. ರವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಣವೀರಯ್ಯ ಸ್ವಾಮಿ, ಸಿದ್ದೇಶ ಗು. ವಿರಕ್ತಮಠ, ಪಂಪಾಪತಿ ಹೂಗಾರ, ಸುಧಾಕರ ಅಸ್ಕಿಹಾಳ, ರಂಗಸ್ವಾಮಿ, ಜೋಷೆಫ್ ಆಶಾಪೂರ, ಚಿದಾನಂದ ನೂಲಿ, ಚಂದ್ರಶೇಖರ ದಂಡಿನ್, ನರಸಿಂಹಲು ಚಿಕ್ಕಸೂಗೂರ, ಎಂ. ನರೇಂದ್ರ ಕುಮಾರ ಹಾಗೂ ರಾಘವೇಂದ್ರ ಗುರುಪಾಗ ಹಾಗೂ ಇನ್ನುಳಿದ ರಾಯಚೂರು ಕಲಾವಿದರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments