ರಾಯಚೂರು,ಜು.೨೩-ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಗುರುವಾರದಂದು ರಾಯಚೂರು ನಗರದಲ್ಲಿರುವ ಓಫೆಕ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವಿವಿಧ ವಿಭಾಗಗಳಾದ ಕಾರ್ಡಿಯಾಲಜಿ. ಕಿಮೋ ಥೆರಫಿ. ಡಯಾಲಿಸಸ್ ಕ್ಯಾಥಲ್ಯಾಬ್ ಸ್ಕ್ಯಾನಿಂಗ್ ಸೆಂಟರ್. ಟ್ರಾಮಾ ಕೇರ್ ಸೇರಿದಂತೆ ಇತರೆ ವಿಭಾಗಗಳ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಮತ್ತು ಆಸ್ಪತ್ರೆಗೆ ಅವಶ್ಯಕತೆ ಇರುವ ಉಪಕರಣಗಳ ಪಟ್ಟಿ ಕೊಡಿ ಎಂದು ಆಸ್ಪತ್ರೆಯ ನಿರ್ದೆಶಕರಿಗೆ ಹೇಳಿದರು. ಓಫೆಕ್ ಆಸ್ಪತ್ರೆಯ ಬಂದ ರೋಗಿಗಳ ಆರೋಗ್ಯ ವಿಚಾರಿಸಿದ ಅವರು ಚಿಕಿತ್ಸೆ ಹೇಗೆ ನೀಡುತ್ತಿದ್ದಾರೆ ಎಂದು ಅವರಿಂದ ಮಾಹಿತಿ ಪಡೆದು. ಆಸ್ಪತ್ರೆಯಲ್ಲಿ ಸ್ವಚ್ಚತೆ ಕಾಪಾಡುವಂತೆಯು ಸಂಬಂಧಿಸಿದವರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಓಫೆಕ್ ಆಸ್ಪತ್ರೆಯ ನಿರ್ದೆಶಕ ಡಾ.ರಮೇಶ್. ಸೇರಿದಂತೆ ಆಸ್ಪತ್ರೆಯ ಇತರೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.







Recent Comments