ರಾಯಚೂರು, ಜುಲೈ 30: ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿ ಜುಲೈ 1ರಿಂದ ಜುಲೈ 30ರವರೆಗೆ ಸಾಮಾನ್ಯ ಪ್ರಮಾಣಕ್ಕಿಂತ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ.ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಸಾಮಾನ್ಯವಾಗಿ 90.1 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 58.8 ಮಿ.ಮೀ. ಮಳೆಯಾಗಿದೆ. ಕಳೆದ ಏಳು ದಿನಗಳ (ಜುಲೈ 24ರಿಂದ 30ರವರೆಗೆ) ಅವಧಿಯಲ್ಲಿಯೂ ಶೇ.63ರಷ್ಟು ಮಳೆ ಕೊರತೆ ಕಂಡುಬಂದಿದೆ.ತಾಲೂಕುವಾರು ಅಂಕಿ-ಅಂಶಗಳ ಪ್ರಕಾರ, ಸಿಂಧನೂರು ತಾಲೂಕಿನಲ್ಲಿ ಅತಿ ಹೆಚ್ಚು ಶೇ.70ರಷ್ಟು ಮಳೆ ಕೊರತೆ ದಾಖಲಾಗಿದ್ದು, ಅರಕೇರಾದಲ್ಲಿ ಶೇ.47, ಮಸ್ಕಿಯಲ್ಲಿ ಶೇ.41, ದೇವದುರ್ಗದಲ್ಲಿ ಶೇ.29, ಮಾನ್ವಿಯಲ್ಲಿ ಶೇ.28 ಹಾಗೂ ಲಿಂಗಸುಗೂರಿನಲ್ಲಿ ಶೇ.33ರಷ್ಟು ಮಳೆ ಕೊರತೆ ಕಂಡುಬಂದಿದೆ.ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 7 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ ಪ್ರಮಾಣಕ್ಕಿಂತ ಶೇ.233ರಷ್ಟು ಹೆಚ್ಚುವರಿ ಮಳೆಯಾಗಿದೆ. ಮಸ್ಕಿ ತಾಲೂಕಿನಲ್ಲಿ ಶೇ.963ರಷ್ಟು ಹಾಗೂ ಲಿಂಗಸುಗೂರಿನಲ್ಲಿ ಶೇ.516ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.ಜೂನ್ 1ರಿಂದ ಜುಲೈ 30ರವರೆಗೆ ದಕ್ಷಿಣ-ಪಶ್ಚಿಮ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ 175.3 ಮಿ.ಮೀ. ಮಳೆಯಾಗಬೇಕಿದ್ದರೆ, 127.7 ಮಿ.ಮೀ. ಮಳೆಯಾಗಿ ಶೇ.27ರಷ್ಟು ಕೊರತೆ ಉಂಟಾಗಿದೆ.ವರ್ಷದ ಆರಂಭದಿಂದ (ಜನವರಿ 1ರಿಂದ ಜುಲೈ 30ರವರೆಗೆ) ಜಿಲ್ಲೆಯಲ್ಲಿ ಒಟ್ಟು 253.6 ಮಿ.ಮೀ. ಮಳೆಯಾಗಿದ್ದು, ಇದು ಸಾಮಾನ್ಯ ಪ್ರಮಾಣಕ್ಕಿಂತ ಶೇ.4ರಷ್ಟು ಹೆಚ್ಚಾಗಿದೆ.ತಾಲೂಕುವಾರು ಮಳೆ ಕೊರತೆ (ಜುಲೈ 1ರಿಂದ 30ರವರೆಗೆ):ಸಿಂಧನೂರು – ಶೇ.70 ಕೊರತೆಅರಕೇರಾ – ಶೇ.47 ಕೊರತೆಮಸ್ಕಿ – ಶೇ.41 ಕೊರತೆಸಿರವಾರ – ಶೇ.35 ಕೊರತೆಲಿಂಗಸುಗೂರು – ಶೇ.33 ಕೊರತೆದೇವದುರ್ಗ – ಶೇ.29 ಕೊರತೆಮಾನ್ವಿ – ಶೇ.28 ಕೊರತೆರಾಯಚೂರು – ಶೇ.16 ಕೊರತೆಮಳೆ ಕೊರತೆಯಿಂದ ಜಿಲ್ಲೆಯ ರೈತರು ಆತಂಕಕ್ಕೀಡಾಗಿದ್ದು, ಮುಂಗಾರು ಚುರುಕುಗೊಳ್ಳುವ ನಿರೀಕ್ಷೆಯಲ್ಲಿ ಕೃಷಿ ಚಟುವಟಿಕೆಗಳು ಮುಂದುವರಿದಿವೆ.





Recent Comments