Wednesday, July 29, 2026
Google search engine
Homeರಾಯಚೂರುರಾಯಚೂರು ನಗರಜ್ಯೋತಿ‌ಕಾಲೋನಿ ಮದರಸಾ ಅಭಿವೃದ್ದಿಗೆ ೫೦ ಲಕ್ಷ ರೂ ಅನುದಾನ: ವಸಂತಕುಮಾರರಿಗೆ ಆಡಳಿತ ಮಂಡಳಿ ಸನ್ಮಾನ

ಜ್ಯೋತಿ‌ಕಾಲೋನಿ ಮದರಸಾ ಅಭಿವೃದ್ದಿಗೆ ೫೦ ಲಕ್ಷ ರೂ ಅನುದಾನ: ವಸಂತಕುಮಾರರಿಗೆ ಆಡಳಿತ ಮಂಡಳಿ ಸನ್ಮಾನ

ರಾಯಚೂರು ,ಜೂ.೨೦-ನಗರದ ಮಹಿಳಾ ಮದರಸಾ ಬನಾತ್ ಫೈಜಾನ್ -ಎ -ರಜಾ ಲಿಲ್ ಮದರಸಾದ ಮೂಲಭೂತ ಸೌಕರ್ಯಕ್ಕಾಗಿ ಸರಕಾರದಿಂದ 50ಲಕ್ಷ ರೂ ಅನುದಾನ ಮಂಜೂರು ಮಾಡಿಸಿದ ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರನ್ನು ಮದರಸಾ ಆಡಳಿತ ಮಂಡಳಿಯವರು ಸನ್ಮಾನಿಸಿ ಗೌರವಿಸಲಾಯಿತು. ನಗರದ ಜ್ಯೋತಿ ಕಾಲೋನಿಯಲ್ಲಿ ಇರುವ ಮದರಸಾ ಬನಾತ್ ಫೈಜಾನ ಎ ರಜಾ ಲಿಲ್ ಮದರಸಾ ಇವರ ಮನವಿ ಮೆರೆಗೆ ಎ‌.ವಸಂತಕುಮಾರ ಇವರು ಸರಕಾರಕ್ಕೆ ಶಿಫಾರಸ್ಸು ಮಾಡಿ ಸರಕಾರದಿಂದ 50 ಲಕ್ಷ‌ ರೂ ಅನುದಾನ ಮಂಜೂರು ಮಾಡಿರುವದು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಅನುಕೂಲ ವಾಗಿದೆ ಎಂದು ಮದರಸಾ ಆಡಳಿತ ಮಂಡಳಿ ಅಭಿನಂದಿಸಿತು.ಎ.ವಸಂತಕುಮಾರ ಆಡಳಿತ ಮಂಡಳಿ ಜೊತೆಗೆ ಚರ್ಚಿಸಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ಸರಕಾರ ನೀಡುತ್ತಿದೆ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು, ಮಹಿಳೆಯರು ಶಿಕ್ಷಣ ಪಡೆದರೆ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮನವಿಯನ್ನು ಪರಿಗಣಿಸುವಂತೆ ಎ.ವಸಂತಕುಮಾರ ಅವರಿಗೆ ಕೋರಿ ಸಹಕಾರ ನೀಡಿದ ಡಾ.ರಝಾಕ ಉಸ್ತಾದ ಅವರನ್ನು ಸಹ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಮೌಲಾನಾ ಶಕ್ಷಾವಲಿ ಸೋಹರವರ್ದಿ, ಹಾಫೀಜ್ ಕಮರಲಿ ಅಶ್ರಫಿ, ಹಾಫೀಜ್ ಮೊಹಮ್ಮದ ಖಲೀಲ್, ಹಾಫೀಜಗ ನಿಸಾರ್, ಮೌಲಾನಾ ಸೈಯದ ಅಜರುದ್ದೀನ, ಮೌಲಾನಾ ಜೀಲಾನ ಅಶ್ರಫಿ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments