ರಾಯಚೂರು,ಜೂ.೧೦- ಜಿಲ್ಲಾಧಿಕಾರಿ ಪೂವಿತಾ ಸಿಂಧನೂರಿ ಪಟ್ಟಣ ರಸಗೊಬ್ಬರ ಅಂಗಡಿ,ತಾಲೂಕ ಅಸ್ಪತ್ರೆ ಹಾಗೂ ಇಂದಿರಾ ಕ್ಯಾಂಟಿನ್ ಗೆ ಅನಿರೀಕ್ಷಿತ ಬೇಟಿ ಪರಶೀಲನೆ ನಡೆಸಿದರು.ಪಟ್ಟಣದ ಪಾರಸ್ ರಸಗೊಬ್ಬರ ಅಂಗಡಿಗೆ ಬೇಟಿ ನೀಡಿ ರಸಗೊಬ್ಬರ ದಾಸ್ತಾನು,ದರಗಳ ಕುರಿತು ಮಾಹಿತಿ ಪಡೆದರು.ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ದೂರು ಬಂದಲ್ಲಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕ ಅಸ್ಪತ್ರೆಗೆ ಬೇಟಿ ನೀಡಿ ರೋಗಿಗಳಿಗೆ ದೊರೆಯುತ್ತಿರುವ ಚಿಕಿತ್ಸಾ ವ್ಯವಸ್ಥೆ ,ಸಿಬ್ಬಂದಿಗಳ ಹಾಜರಾತಿ ಕುರಿತು ಮಾಹಿತಿ ಪಡೆದರು.ಇಂದಿರಾ ಕ್ಯಾಂಟಿನ ಭೇಟಿ ದರ ಪರಿಶೀಲಿಸಿದರು. ನಂತರ ನಗರಸಭೆ ಮತ್ತು ತಾಲೂಕ ಪಂಚಾಯತಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದರು. ಕುಡಿಯುವ ನೀರು, ಬೀಜ ರಸಗೊಬ್ಬರಬದಾಸ್ತಾನು, ಪೂರೈಕೆ ಕುರಿತು ನಿಗಾವಹಿಸುವಂತೆ ಸೂಚಿಸಿದರು.ತಹಸೀಲ್ದಾರ,ತಾಲೂಕ ಕೃಷಿ ಅಧಿಕಾರಿ, ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಅಧಿಕಾರಿಗಳಿದ್ದರು.




Recent Comments