Sunday, August 16, 2026
Google search engine
Homeಮುಖ್ಯಾಂಶಗಳುಜಿಲ್ಲೆಗೆ ತಪ್ಪಿದ ಸಚಿವಸ್ಥಾನ: ಗುಂಪುಗಾರಿಕೆಗೆ ಜಿಲ್ಲೆ ಅಭಿವೃದ್ದಿ ಬಲಿ

ಜಿಲ್ಲೆಗೆ ತಪ್ಪಿದ ಸಚಿವಸ್ಥಾನ: ಗುಂಪುಗಾರಿಕೆಗೆ ಜಿಲ್ಲೆ ಅಭಿವೃದ್ದಿ ಬಲಿ

ರಾಯಚೂರು,ಆ.೩- ಹೊಸ ಸಚಿವರ ಪಟ್ಡಿಯನ್ನು ಎಐಸಿಸಿ ಅಂತಿಮಗೊಳಿಸಿದ್ದು ಜಿಲ್ಲೆಯ ಯಾವೊಬ್ಬರಿಗೂ ಸಚಿವ ಸ್ಥಾನ ದೊರೆಯದೆ ಹೋಗಿರುವದು ಜಿಲ್ಲೆಯ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ.ಸೇವಾ ಹಿರಿತನ,ಪಕ್ಷ ನಿಷ್ಠೆ ಯನ್ನು ಪರಿಗಣಿಸದೇ ಜಿಲ್ಲೆಯನ್ನೇ ಕಡೆಗಣಿಸಿದಂತೆ ಆಗಿದೆ. ನಾಲ್ಕು ಜನ ಶಾಸಕರನ್ನು ಆಯ್ಕೆ ಮಾಡಿದ ಜನತೆಗೆ ಕಾಂಗ್ರೆಸ್ ನಿರ್ಲಕ್ಷಿಸಿದಂತಾಗಿದೆ.ಜಿಲ್ಲಾವಾರು,ಪ್ರಾದೇಶಿಕತೆಯನ್ನು ಪರಿಗಣಿಸದೇ ಇರುವದು ಜಿಲ್ಲೆ ಕಾಂಗ್ರೆಸ್ ನಾಯಕತ್ವವನ್ನೆ ಪ್ರಶ್ನಿಸುವಂತಾಗಿದೆ. ಒಂದೊಂದು ಜಿಲ್ಲೆಗೆ ಎರಡು, ಮೂರು ಸಚಿವ ಸ್ಥಾನ ನೀಡಿ ಜಿಲ್ಲೆಯನ್ನು ಕಡೆಗಣಿಸಿದಂತಾಗಿದೆ. ಜಿಲ್ಲಾ ಕಾಂಗ್ರೆಸ್ ನಾಯಕರ ಗುಂಪುಗಾರಿಕೆ,ದ್ವೇಷದ ರಾಜಕಾರಣಕ್ಕೆ ಜಿಲ್ಲೆ ಅಭಿವೃದ್ದಿ ಬಲಿಯಾಗುವಂತಾಗಿರುವದು ವಿಪರ್ಯಾಸ.

RELATED ARTICLES
- Advertisment -
Google search engine

Most Popular

Recent Comments