ರಾಯಚೂರು,ಆ.೨- ಜಲಾನಯನ ಪ್ರದೇಶದಲ್ಲಿಮಳೆ ಮುಂದುವರೆದ ಪರಿಣಾಮ ನಾರಾಯಣ ಪುರ ಜಲಾಶಯ ಒಳ ಹರಿವು ೧ ಲಕ್ಷ ೩೦ ಸಾವಿರ ಕುಸೆಕ್ಸ್ ಹರಿದು ಬರುತ್ತಿದ್ದು ರವಿವಾರದಿಂದ ನದಿಗೆ ಹರಿಸಲು ತೀರ್ಮಾನಿಸಲಾಗಿದೆ.ಒಂದು ಲಕ್ಷ ಕ್ಕೂ ಅಧಿಕ ನೀರು ಹರಿದು ಬಂದಲ್ಲಿ ಲಿಂಗಸುಗುರು ತಾಲೂಕಿನ ಶೀಲ ಹಳ್ಳಿ ಸೇತುವೆ ಮುಳುಗಡೆಯಾಗಲಿದೆ.ಈಗಾಗಲೇ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಬಳಿಯ ಗಡ್ಡೆಗುಳ್ಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ನದಿಪಾತ್ರದ ಜನರು ಎಚ್ಚರದಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.





Recent Comments