ರಾಯಚೂರು.ಜು.೩೧- ಯೂರಿಯಾ ಮತ್ತು ಡಿಎಪಿ ಗೊಬ್ಬರ ಕೊರತೆ ನೀಗಿಸುವಂತೆ ಒತ್ತಾಯಿಸಿ ಅರ್ ಎಪಿಎಂಸಿ ಕಚೇರಿ ಮುಂದೆ ರೈತರು ಮಿಂಚಿನ ಪ್ರತಿಭಟನೆ ನಡೆಸಿದರು.ರೈತರಿಗೆ ಅಗತ್ಯವಿರುವ ರಸಗೊಬ್ಬರ ವ್ಯವಸ್ಥೆ ಮಾಡುವಲ್ಲಿ ಜಿಲ್ಕೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತ ಸಂಘದ ಮುಖಂಡ ಲಕ್ಷ್ಮಣಗೌಡ ಕಡಂಗಂದೊಡ್ಡಿ ಆರೋಪಿಸಿದರು. ಬೆಳಿಗ್ಗೆ ಯಿಂದ ಸಂಜೆಯವರೆಗೆ ಕಾದು ಕುಳಿತರು ಟೋಕನ್ ಕೊಡುತ್ತಿದ್ದಾರೆ ಹೊರತು ಗೊಬ್ಬರ ಸಿಗುತ್ತಿಲ್ಲ ಎಂದು ಪ್ರತಿಭಟನಾಕರರು ಅರೋಪಿಸಿದರು. ನೆರೆಯ ತೆಲಂಗಾಣ ದಲ್ಲಿ ರೈತರ ಬೇಡಿಕೆಯಷ್ಡು ಗೊಬ್ಬರ ಸಿಗುತ್ತದೆ.ಜಿಲ್ಲೆಯಲ್ಲಿವಸಿಗುತ್ತಿಲ್ಲ. ದುಬಾರಿ ಬೆಲೆಗೆ ಮಾರಾಟ,ಲಿಂಕ್ ಗೊಬ್ಬರಕಡ್ಡಾಯ ಮಾರಾಟವಾಗುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೂಡಲೇ ರಸಗೊಬ್ಬರ ವ್ಯವಸ್ಥೆ ಮಾಡದಿದ್ದರೆ ಜಿಲ್ಲಾ ಬಂದ್ ಹೋರಾಟ ನಡೆಸುವದಾಗಿ ಎಚ್ಚರಿಸಿದರು. ಪ್ರತಿಭಟನೆ ಯಲ್ಲಿ ಮಹಿಳೆಯರು, ರೈತರು ಭಾಗವಹಿಸಿದ್ದರು.





Recent Comments