ರಾಯಚೂರು, ಆ.೭- ಪೂರ್ವಮುಂಗಾರು ಬೆಳೆ ಹಾನಿಯಾಗಿದ್ದು ಬೆಳೆ ಪರಸ್ಥಿತಿ ಕುರಿತು ಸರಕಾರವರದಿ ನೀಡಲಾಗುತ್ತಿದ್ದು, ರೈತ ಹಿತ ಕಾಪಾಡಲು ಸರಕಾರ ಬದ್ದವಾಗಿದೆ ಎಂದು ಸಚಿವ ಅಜಯಸಿಂಗ್ ಹೇಳಿದರು.ಅವರಿಂದು ಜಿಲ್ಲೆಯ ಬರ-ನೆರೆ ಪರಸ್ಥಿತಿ ಅಧ್ಯಯನ ಪ್ರಾರಂಭಿಸಿ ಹುಣಸಿಹಾಳ ಹುಡಾ ಗ್ರಾಮದಲ್ಲಿ ಮಾಧ್ಯಮ ಗಳೊಂದಿಗೆಮಾತನಾಡಿದರು.ರೈತರ ಬೆಳೆ ಹಾನಿಯಾಗಿರುವ ಪ್ರಾಥಮಿಕ ಮಾಹಿತಿಯಿದೆ. ಜಿಲ್ಲಾವಾರುಮಾಹಿತಿ ಪಡೆದು ಕ್ರಮಕ್ಕೆ ಮುಖ್ಯಮಂತ್ರಿ ಗಳು ಮುಂದಾಗಿದ್ದಾರೆ. ಅಧಿವೇಶನ ಪ್ರಾರಂಭವಾಗುವ ಮುನ್ನವೇ ಸರಕಾರ ಕ್ರಮ ಕೈಗೊಳ್ಳಲಿದೆ. ಫಸಲ್ವಬೀಮಾವಯೋಜನೆಯಡಿ ಗೊಂದಲ ಇರುವದು ನಿಜ. ಈ ಕುರಿತು ಸರಕಾರ ಶೀಘ್ರದಲ್ಲಿ ಕ್ರಮಕೈಗೊಳ್ಳಲಿದೆ ಎಂದರು.ಸಚಿವ ಸ್ಥಾನ ಹಂಚಿಕೆ ಕುರಿತು ಅನೇಕರಲ್ಲಿ ಅಸಮಧಾನವಿದೆ.ಸಹಜ. ಹಿರಿಯರು,ಅನುಭವಿಗಳಿಗೆ ಸಚಿವಸ್ಥಾನ ದೊರಕದೇ ಹೋಗಿದೆ. ಪಕ್ಷ ವರಿಷ್ಟರು ಸರಿಪಡಿಸುವ ಕೆಲಸಬಮಾಡುತ್ತಿದ್ದಾರೆ ಎಂದರು.





Recent Comments