Wednesday, March 25, 2026
Google search engine
Homeರಾಯಚೂರುಖನಿಜ ಪರಿಶೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ಮ್ಯಾಗ್ನೆಟಿಕ್ ಸೆನ್ಸರ್ ಬಳಸಿ ಹೆಲಿಕಾಪ್ಟರ್ ಸರ್ವೆ

ಖನಿಜ ಪರಿಶೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ಮ್ಯಾಗ್ನೆಟಿಕ್ ಸೆನ್ಸರ್ ಬಳಸಿ ಹೆಲಿಕಾಪ್ಟರ್ ಸರ್ವೆ

ರಾಯಚೂರು: ಕರ್ನಾಟಕದ ಯಾದಗಿರಿ, ರಾಯಚೂರು, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳು ಹಾಗೂ ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ (ಪುಟ್ಟಪರ್ತಿ) ಜಿಲ್ಲೆ ಮತ್ತು ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ 2026ರ ಜನವರಿ ಮೊದಲ ವಾರದಿಂದ ಮ್ಯಾಗ್ನೆಟಿಕ್ ಸೆನ್ಸರ್‌ಗಳನ್ನು ಅಳವಡಿಸಿದ ಹೆಲಿಕಾಪ್ಟರ್‌ಗಳ ಮೂಲಕ ವೈಮಾನಿಕ ಸಮೀಕ್ಷೆ (ಎಯರ್‌ಬೋನ್ ಸರ್ವೆ) ನಡೆಯುತ್ತಿದೆ.

ಈ ಯೋಜನೆಯಡಿ ಕರ್ನಾಟಕದ ಹೆಚ್-02 ಮತ್ತು ಹೆಚ್-03 ಬ್ಲಾಕ್‌ಗಳಲ್ಲಿ ನೆಲಮಟ್ಟದಿಂದ 200 ಅಡಿ ರಿಂದ 1000 ಅಡಿ ಎತ್ತರ (AGL)ದಲ್ಲಿ ಹೆಲಿಕಾಪ್ಟರ್ ಹಾರಿಸಿ ಹೈ ರೆಸಲ್ಯೂಶನ್ ಭೌಗೋಳಿಕ ದತ್ತಾಂಶ ಸಂಗ್ರಹಿಸಲಾಗುತ್ತಿದೆ.

ಟೈಮ್ ಡೊಮೇನ್ ಎಲೆಕ್ಟ್ರೋಮ್ಯಾಗ್ನೆಟಿಕ್ (TDEM) ವಿಧಾನವನ್ನು ಮ್ಯಾಗ್ನೆಟಿಕ್ ಡೇಟಾದೊಂದಿಗೆ ಸಂಯೋಜಿಸಲಾಗಿದ್ದು, ಭೂಗತ ಭೂವೈಜ್ಞಾನಿಕ ರಚನೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ, ಅಮೂಲ್ಯ ಖನಿಜ ನಿಕ್ಷೇಪಗಳಿಗೆ ಸಂಬಂಧಿಸಿದ ವಾಹಕ ವಲಯಗಳನ್ನು ಗುರುತಿಸಲು ಸಹಾಯ ಮಾಡಲಿದೆ.

ಈ ಮಹತ್ವದ ಸಮೀಕ್ಷಾ ಕಾರ್ಯದ ಯೋಜನಾ ಅನುಷ್ಠಾನ ಸಂಸ್ಥೆಯಾಗಿ Excalibur McFarlane Private Limited ಕಾರ್ಯನಿರ್ವಹಿಸುತ್ತಿದೆ. ಹೆಲಿಬೋರ್ನ್ ಟೈಮ್ ಡೊಮೇನ್ ಎಲೆಕ್ಟ್ರೋಮ್ಯಾಗ್ನೆಟಿಕ್ (TDEM) ಮತ್ತು ಮ್ಯಾಗ್ನೆಟಿಕ್ ಸಮೀಕ್ಷೆಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ.

ಯೋಜನೆ ಪೂರ್ಣಗೊಂಡ ಬಳಿಕ ಸಂಗ್ರಹಿಸಲಾದ ಅಮೂಲ್ಯ ದತ್ತಾಂಶವನ್ನು ರಾಷ್ಟ್ರೀಯ ಭೂವಿಜ್ಞಾನ ದತ್ತಾಂಶ ಸಂಗ್ರಹಣಾ ಪೋರ್ಟಲ್ (NGDR) ಮೂಲಕ ಸರ್ಕಾರ ಮತ್ತು ಖಾಸಗಿ ಪರಿಶೋಧನಾ ಸಂಸ್ಥೆಗಳಿಗೆ ಲಭ್ಯವಾಗುವಂತೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುತ್ತದೆ.

ಈ ಸಮೀಕ್ಷೆಯ ಫಲಿತಾಂಶಗಳನ್ನು ಭವಿಷ್ಯದ ಖನಿಜ ಪರಿಶೋಧನಾ ತಂತ್ರಗಳನ್ನು ಸುಧಾರಿಸಲು ಹಾಗೂ ಸಂಪನ್ಮೂಲ ಅಭಿವೃದ್ಧಿ ಯೋಜನೆಗಳಿಗೆ ಬೆಂಬಲವಾಗಿ ಬಳಸಲಾಗುತ್ತದೆ ಎಂದು ಭಾರತದ ಭೂವೈಜ್ಞಾನಿಕ ಸಮೀಕ್ಷೆ (GSI) ಭೂಬೌತಶಾಸ್ತ್ರಜ್ಞೆ ಎಂ. ನಾಗದಿವ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments